ಮೈಸೂರು,ಏಪ್ರಿಲ್,14,2025 (www.justkannada.in): 5 ಸಾವಿರ ಎಕರೆ ಜಾಗ ವಿಚಾರಕ್ಕೆ ಚಾಮರಾಜ ನಗರ ಡಿಸಿಗೆ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಪತ್ರ ಬರೆದ ವಿಚಾರ ಕುರಿತು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ಯದುವೀರ್, ಆ ಭಾಗದ ಜನರು ಆತಂಕ ಪಡುವ ಅಗತ್ಯವಿಲ್ಲ. ನನ್ನಿಂದ ಅಥವಾ ನನ್ನ ತಾಯಿಯಿಂದ ಯಾವುದೇ ಅನಾನುಕೂಲವಾಗುವುದಿಲ್ಲ. ನಮ್ಮ ತಾಯಿ ನಮಗೆ ಸೇರಿದ ಜಾಗ ಇದೆ ಎಂದು ಪತ್ರ ಬರೆದಿದ್ದಾರೆ.. ಪತ್ರ ಬರೆದ ಕಾರಣಕ್ಕೆ ಆತಂಕ ಪಡಬೇಕಿಲ್ಲ. ಅಲ್ಲಿನ ಜನರಿಗೆ ನಾವು ಯಾವುದೇ ತೊಂದರೆ ಕೊಡಲ್ಲ. ಡಿಸಿ ಅವರು ವರದಿ ಕೊಡಲಿ. ಅದನ್ನು ಬಿಟ್ಟು ಕೆಲವರು ಆತಂಕ ಸೃಷ್ಟಿಸುವ ಕೆಲಸ ಮಾಡಲು ಹೊರಟಿದ್ದಾರೆ. ನಮ್ಮಿಂದ ಅಲ್ಲಿನ ಜನಕ್ಕೆ ತೊಂದರೆ ಆಗಲ್ಲ. ನಮ್ಮ ಆಸ್ತಿ ಜಮೀನು ಬಗ್ಗೆ ಡಿಸಿ ಅವರಿಗೆ ತಿಳಿಸಿದ್ದೇವೆ. ಡಿಸಿ ಅವರಿಂದ ವರದಿ ಬರಲಿ. ಅಲ್ಲಿನ ಜನರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ನಮ್ಮಿಂದ ಯಾವುದೇ ಜನರಿಗೆ ಅನಾನುಕೂಲವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತ್ಯೇಕ ಜಾತಿ ಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಸಂವಿಧಾನದಲ್ಲಿ ಸಮುದಾಯದ ಗಣತಿಗೆ ಅವಕಾಶ ಇದೆ. ಅದೇ ರೀತಿ ವೀರಶೈವ ಲಿಂಗಾಯತ ಮಹಾಸಭಾ ಜಾತಿಗಣತಿ ಮಾಡಲು ಮುಂದಾಗಿದೆ. ಸಂವಿಧಾನದಲ್ಲಿ ಅವಕಾಶ ಮಾಡಬಹುದು ಎಂದರು.
Key words: 5,000 acres, land issue, letter, MP Yaduveer