ನಮಗೆ ಪರಿಹಾರದ ಅಗತ್ಯವಿಲ್ಲ: ಟಿಡಿಆರ್ ಸರ್ಟಿಫಿಕೇಟ್ ಕೊಟ್ಟರೆ ಸಾಕು- ಸಂಸದ ಯದುವೀರ್

ಮೈಸೂರು,ಜನವರಿ,27,2025 (www.justkannada.in):  ಬೆಂಗಳೂರು ಆರಮನೆ ಆಸ್ತಿ ವಿಚಾರ ಸಂಬಂಧ ಸುಗ್ರೀವಾಜ್ಞೆಗೆ ಮುಂದಾಗಿರುವ ಸರ್ಕಾರದ ನಿರ್ಧಾರ ಕುರಿತು ಪ್ರತಿಕ್ರಿಯಿಸಿರುವ  ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಪರಿಹಾರ ಕೊಡುವ ಅಗತ್ಯವಿಲ್ಲ. ಟಿಡಿಆರ್ ಸರ್ಟಿಫಿಕೇಟ್ ಕೊಟ್ಟರೆ ಸಾಕು ಎಂದಿದ್ದಾರೆ.

ಸುತ್ತೂರಿನಲ್ಲಿ ಇಂದು ಮಾತನಾಡಿದ ಸಂಸದ ಯದುವೀರ್ , ಸರ್ಕಾರ ನಮಗೆ ಪರಿಹಾರದ ಬದಲಿಗೆ ಕೊಡುವ ಟಿಡಿಆರ್ ಕೊಟ್ಟರೆ ಸಾಕು. ಸರ್ಕಾರದ ಟಿಡಿಆರ್ ಕೊಡುತ್ತಿಲ್ಲ.  ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಈ ಸಂಬಂಧ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಸರ್ಕಾರ ಅವರ ಕೈಯಲ್ಲಿ ಇದೆ. ಹೀಗಾಗಿ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಇದ್ದಾಗ ನಮ್ಮ ಮುಂದೆ ಯಾಕೆ ಬರುತ್ತಾರೆ. ಸಾರ್ವಜನಿಕ ಹಿತದೃಷ್ಟಿಗಾಗಿ ಅಂದರೆ ನಮ್ಮ ಆಸ್ತಿನೇ ಬೇಕಾ.? ಎಂದು ಪ್ರಶ್ನಿಸಿದರು.

ಸಾರ್ವಜನಿಕರಿಗೆ ಪರಿಹಾರ ಕೊಡ್ತಾರೆ. ಹಿಂದೆ ಸದಾಶಿವನಗರ ಕೂಡ ಬೆಂಗಳೂರು ಅರಮನೆಗೆ ಸೇರಿತ್ತು. ನಾವು ಆಗಲೇ ಸಾಮಾಜಿಕನ್ಯಾಯದಲ್ಲಿ ಬಹಳಷ್ಟು ಜಮೀನು ಕೊಟ್ಟಿದ್ದೇವೆ. ಸಾಮಾನ್ಯರಿಗೆ ಏನು ಕಾನೂನು ಇದೆ ಅದು ನಮಗೂ ಇದೆ. ಟಿಡಿಆರ್ ಬದಲು ನಗದು ರೂಪದಲ್ಲಿ ಪರಿಹಾರ ಹೇಳಬಹುದಿತ್ತು. ಆದರೆ ನಮ್ಮ ಸರ್ಕಾರದ ಖಜಾನೆಗೆ ಧಕ್ಕೆ ಆಗುತ್ತೆ ಅಂತ ನಾವು ಟಿಡಿಆರ್ ಗೆ ಒಪ್ಪಿಕೊಂಡಿದ್ದೇವೆ. ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್ ಆದೇಶ ಇದೆ. ರಾಜ್ಯ ಸರ್ಕಾರದಿಂದ ಟಿಡಿಆರ್ ಕೊಡುವ ಮೂಲಕ  ಒಂದು ಸರ್ಟಿಫಿಕೇಟ್ ಕೊಡಬೇಕೇ ಹೊರತು ಒಂದು ಪೈಸೆನೂ ಕೊಡಬೇಕಾಗಿಲ್ಲ ಎಂದರು.

ಸಿಎಂ ಮತ್ತು ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಗೆ ಇಡಿ ನೋಟಿಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್,  ಹೆಚ್ಚಿನ ತನಿಖೆಗಾಗಿ ಇಡಿ ನೋಟೀಸ್ ನೀಡುವ ಪ್ರಕ್ರೀಯೆ ಆರಂಭಿಸಿದೆ.‌ ನಾವು ಆರಂಭದಿಂದಲೂ ರಾಜೀನಾಮೆಗೆ ಆಗ್ರಹಿಸಿದ್ದೇವೆ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಇದು ಬಹಳ ಗಂಭೀರವಾದ ಪ್ರಕರಣ. ಬ್ಯಾಂಕ್ ಗಳು ಸ್ನೇಹಮಯಿಯಾಗಿ ಕೆಲಸ ಮಾಡಬೇಕು. ಕಿರುಕುಳ ಕೊಡಬಾರದು.  ಈಗ ಆಗಿರುವ ಘಟನೆ ನಿಜವಾಗಿಯೂ ಖಂಡನೀಯ ಎಂದರು.

Key words: Bangalore, palace, Ordinance, MP,Yaduveer