ಬೆಂಗಳೂರು,ನ,22,2019(www.justkannada.in): ಅಪರೇಷನ್ ಕಮಲದ ಪಿತಾಮಹ ಮಿಸ್ಟರ್ ಬಿ.ಎಸ್ ಯಡಿಯೂರಪ್ಪ. ನಮ್ಮ ಶಾಸಕರಿಗೆ ಅಧಿಕಾರ ಹಣದ ಆಮಿಷ ಒಡ್ಡಿ ಸೆಳೆದು ಸರ್ಕಾರ ರಚಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, 2009ರಲ್ಲೂ ಬಿ.ಎಸ್ ಯಡಿಯೂರಪ್ಪಗೆ ಜನಮತ ಇರಲಿಲ್ಲ. ಅಂದೂ ಸಹ 9ರಿಂದ 10 ಶಾಸಕರನ್ನ ಹಣ ಅಧಿಕಾರದ ಆಮಿಷ ನೀಡಿ ಕರೆದೊಕೊಂಡು ಹೋದ್ರು. ಈಗಲೂ ಸಹ ಬಿಜೆಪಿಗತೆ ಜನಮತ ಇಲ್ಲ. ಆದರೂ ಅಪರೇಷನ್ ಕಮಲದ ಮೂಲಕ ನಮ್ಮ ಶಾಸಕರಿಗೆ ಹಣ ಅಧಿಕಾರದ ಆಸೆ ತೋರಿಸಿ ಕರೆದೊಯ್ದಿದ್ದಾರೆ. ಬಿಎಸ್ ವೈ ಮಂತ್ರಿ ಆಸೆ ತೋರಿಸಿಬಿಟ್ಟಿದ್ದಾರೆ ಹೀಗಾಗಿ ಅನರ್ಹರು ಮಂತ್ರಿ ಆಗ್ತೀನಿ ಮಂತ್ರಿ ಆಗ್ತೀನಿ ಅಂತಾರೆ. ಆದ್ರೆ ಅವರು ಗೆದ್ದರಲ್ವಾ ಮಂತ್ರಿ ಆಗೋದು ಎಂದು ಟಾಂಗ್ ನೀಡಿದರು.
ಇದೇ ವೇಳೆ ಮೂವರು ಅನರ್ಹ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಹೋದಲ್ಲಿ ಬಂದಲ್ಲಿ ಮೂವರು ಶಾಸಕರು ಒಟ್ಟಿಗೆ ಇರ್ತಿದ್ರು. ಮೂರು ಶಾಸಕರನ್ನ ಎಸ್ ಬಿಎಂ ಅಂತಾ ಕರೆಯುತ್ತಿದ್ದರು. ನನ್ನ ಜತೆ ಚೆನ್ನಾಗಿಯೇ ಇದ್ದರು. ಕೋಟಿಗಟ್ಟಲೆ ಅನುದಾನವನ್ನೂ ಪಡೆದರು. ಸೋಮಶೇಖರ್ ಗೆ ಕಾಂಗ್ರೆಸ್ ಐದು ಬಾರಿ ಅವಕಾಶ ನೀಡಿತ್ತು. ಯಾವ ಬಾಯಲ್ಲಿ ನನ್ನನ್ನ ಹೊಗಳಿದ್ರೋ ಅದೇ ಬಾಯಲ್ಲಿ ಈಗ ಟೀಕೆ ಮಾಡುತ್ತಿದ್ದಾರೆ. ಅವರೇಗೇನು ಮನುಷ್ಯತ್ವ ಇದೆಯಾ..? ಮನುಷ್ಯನಿಗೆ ಒಂದು ನಾಲಿಗೆ ಇರಬೇಕು ಎಂದು ಅನರ್ಹ ಶಾಸಕರ ವಿರುದ್ದ ಹರಿಹಾಯ್ದರು.
Key words: Mr. BS Yeddyurappa- father of- Operation kamala- former CM Siddaramaiah