ಮೈಸೂರು,ಫೆಬ್ರವರಿ,2,2021(www.justkannada.in): ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮಿಸ್ಟರ್ ಪ್ರತಾಪ್ ಸಿಂಹ ಇಲ್ಲಿವರೆಗೆ ಕೊಡಗಿಗೆ ಏನು ಮಾಡಿದ್ದೀರಿ.? ರೋಡ್ ಚೆನ್ನಾಗಿದ್ಯಾ.? ಕೊಡಗಿಗೆ ಮಂತ್ರಿ ಸ್ಥಾನ ಕೊಟ್ಟಿದ್ದೀರಾ.? ಕನಿಷ್ಟ ಯಾವುದಾದರು ಬೋರ್ಡ್ ಛೇರ್ಮನ್ ಕೊಡಗಿನವರನ್ನ ಮಾಡಿದ್ದೀರಾ.? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂ. ಲಕ್ಷ್ಮಣ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕೊಡಗಿನ ಜನ ಬಿಜೆಪಿಯನ್ನ ಇಂಜಕ್ಟ್ಟ್ ಮಾಡಿಕೊಂಡಿದ್ದಾರೆ ಇದಕ್ಕೆ ಇವರು ಸರಿಯಾಗಿ ಮಾಡ್ತಾ ಇದಾರೆ. ಏನೇ ಆದ್ರು ಜನ ಓಟ್ ಹಾಕ್ತಾರೆ ಅಂತ ಇದೀರಿ. ಕೊಡಗಿನ ಜನ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮೈಸೂರು ವಿಮಾನ ನಿಲ್ದಾಣವನ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದಾಗಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಎಂ. ಲಕ್ಷ್ಮಣ್, ಮೈಸೂರು ಭಾಗಕ್ಕೆ ಏನು ಮಾಡಿದ್ದೀರಿ. ಮೈಸೂರು ವಿಮಾನ ನಿಲ್ದಾಣವನ್ನ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮಾಡ್ತೀವಿ ಅಂತೀರಿ. ಎಲ್ಲಿಂದ ಹಣ ತಂದಿದ್ದೀರಿ ಹೇಳಿ.? ಎಂದು ಪ್ರಶ್ನಿಸಿದರು.
ದೆಹಲಿಯಲ್ಲಿ ರೈತ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, 25 ಜನ ಮುಂಚೂಣಿ ಹೋರಾಟಗಾರರು ಕಾಣೆಯಾಗಿದ್ದಾರೆ. ನೂರಕ್ಕೂ ಹೆಚ್ಚು ರೈತರು ನಾಪತ್ತೆಯಾಗಿದ್ದಾರೆ. ಇದರ ಹಿಂದೆ ಕೆಲ ಬಿಜೆಪಿ ಗೂಂಡಾಗಳ ಕೈವಾಡ ಇದೆ. ಸಿಂಘ ಗಡಿಯ ರಸ್ತೆಯಲ್ಲಿ ಮೊಳೆ ಹೊಡೆಸಿದ್ದಾರೆ. ಇವರು ವ್ಯವಸ್ಥಿತವಾಗಿ ರೈತ ಹೋರಾಟಕ್ಕೆ ತಡಯೊಡ್ಡುತ್ತಿದ್ದಾರೆ. ರೈತರ ಏನೇ ನಿರ್ಧಾರ ಮಾಡಿದರೂ ನಾವು ಜೊತೆಗಿರುತ್ತೇವೆ. ರೈತರು ರಸ್ತೆ ತಡೆ ಅಲ್ಲ, ರಸ್ತೆ ಅಗೆದರೂ ಕೂಡ ಕಾಂಗ್ರೆಸ್ ಪಕ್ಷ ಅವರ ಜೊತೆಗಿರುತ್ತದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದರು.
Key words: Mr. Pratap simha- Kodagu – KPCC –spokesperson- M Laxman