ಭಾರತ ಮಾತೆ ರಕ್ಷಣೆಗೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧ- ಪ್ರಧಾನಿ ಮೋದಿ.

ನವದೆಹಲಿ,ಏಪ್ರಿಲ್,6,2023(www.justkannada.in): ಭಾರತ ಮಾತೆ ರಕ್ಷಣೆಗೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಎಂತಹ  ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಬಿಜೆಪಿ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಬಿಜೆಪಿಯ 44ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಹನುಮ ಜಯಂತಿ. ಇಂದು ಬಜರಂಗ ಬಲಿಯ ಹೆಸರು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಹನುಮಂತ ಅಪಾರ ಶಕ್ತಿಯನ್ನು ಹೊಂದಿದ್ದಾನೆ. ಹನುಮಂತ ಹೇಗೆ ರಾಕ್ಷಸರನ್ನು ಎದುರಿಸುತ್ತಿದ್ದನೋ ಹಾಗೆಯೇ ಬಿಜೆಪಿ ಕೂಡ ಭ್ರಷ್ಟಾಚಾರದ ವಿರುದ್ದ ಹೋರಾಡುತ್ತದೆ. ಭಾರತ ಮಾತೆಯ ರಕ್ಷಣೆಗೆ ಬಿಜೆಪಿ ಬದ್ಧವಾಗಿದೆ. ಇದಕ್ಕಾಗಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ನುಡಿದರು.

1980ರ ಏಪ್ರಿಲ್ 6ರಂದು ಬಿಜೆಪಿ ಸ್ಥಾಪನೆಯಾಯಿತು. ಜನಸಂಘದ ಮುಖಂಡರು ಜನತಾ ಪಕ್ಷ ತೊರೆದು ಬಿಜೆಪಿ ರೂಪದಲ್ಲಿ ಹೊಸ ಪಕ್ಷ ಆರಂಭಿಸಿದರು. ಬಿಜೆಪಿ ಸಂಸ್ಥಾಪನಾ ದಿನ ಅಂದರೆ ಇಂದಿನಿಂದ ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರವರೆಗೆ ಏಳು ದಿನಗಳ ಕಾಲ ಪಕ್ಷವು ‘ಸಾಮಾಜಿಕ ನ್ಯಾಯ ಸಪ್ತಾಹ’ವನ್ನು ಆರಂಭಿಸಿದೆ.

Key words: Ready -take -tough -decisions – protect – India – PM Modi