ಮೈಸೂರು, ಫೆ.೨೫,೨೦೨೫ : ಕಾನೂನಿನ ಅನ್ವಯದಂತೆ ನಾನು ಕರ್ತವ್ಯ ನಿರ್ವಹಿಸಿರುವೆ. ಇದಕ್ಕೆ ಹೊರತಾಗಿ ಯಾವುದೇ ಕಾನೂನು ಬಾಹಿರ ನಿರ್ಣಯಗಳನ್ನು ತೆಗೆದುಕೊಂಡಿಲ್ಲ ಎಂದು ಮೈಸೂರಿನ ಈ ಹಿಂದಿನ ಜಿಲ್ಲಾಧಿಕಾರಿ ಹಾಗೂ ಹಾಲಿ ರಾಯಚೂರು ಸಂಸದ ಜಿ.ಕುಮಾರನಾಯಕ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಪರಿಹಾರ ರೂಪದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ನಿವೇಶನ ಗಳನ್ನು ಹಂಚಿಕೆ ಮಾಡಿದ ಪ್ರಕರಣ ದಲ್ಲಿ, ಅಂದಿನ ಮೈಸೂರು ಜಿಲ್ಲಾಧಿಕಾರಿ, ಈಗಿನ ರಾಯಚೂರು ಕ್ಷೇತ್ರದ ಕಾಂಗ್ರೆಸ್ ಸಂಸದ ಜಿ.ಕುಮಾರ ನಾಯಕ ಅವರು ಕರ್ತವ್ಯಲೋಪ ಎಸಗಿದ್ದಾರೆ ಎಂಬ ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ “ ಜಸ್ಟ್ ಕನ್ನಡ “ ಅವರನ್ನು ಮಾತನಾಡಿಸಿತು..
ಲೋಕಾಯುಕ್ತದ ವರದಿಯನ್ನು ನಾನಿನ್ನು ನೋಡಿಲ್ಲ. ಅದು ನನ್ನ ಕೈ ಸೇರಿದ ಮೇಲೆ ಅದರ ಬಗ್ಗೆ ಪ್ರತಿಕ್ರಿಯಿಸುವೆ. ಪತ್ರಿಕೆಗಳಲ್ಲಿ ಬಂದ ವರದಿ ಗಮನಿಸಿರುವೆ. ಈ ಆಧಾರದ ಮೇಲೆ ಮಾತನಾಡುವುದಾದರೇ ನಾನು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನನ್ನ ಕರ್ತವ್ಯ ನಿರ್ವಹಣೆ ವೇಳೆ ಯಾವುದೇ ಲೋಪವೆಸಗಿಲ್ಲ. ಯಾವುದೇ ಶಿಫಾರಸ್ಸು, ಒತ್ತಡಗಳು ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಜಮೀನಿನ ಅನ್ಯಕ್ರಾಂತದ ಬಗ್ಗೆ ಹೇಳುವುದಾದರೆ ಕಾನೂನಿನಂತೆ ಕೆಲಸ ನಿರ್ವಹಿಸಿರುವೆ. ಕಂದಾಯ ಇಲಾಖೆ ಭೂ ಪರಿವರ್ತನೆ ಸಂದರ್ಭದಲ್ಲಿ ಯಾವ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದೆಯೋ ಅದೇ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಿರುವೆ. ಭೂಮಿಯ ಒಡೆಯ ಯಾರು..? ಭೂಕಾಯ್ದೆಯ ಉಲ್ಲಂಘನೆಯಾಗಿದೆಯಾ..? ಪರಿಶಿಷ್ಠರಿಗೆ ಸೇರಿದ ಜಮೀನಾ..? ಎಂಬ ಅಂಶಗಳನ್ನ ಪರಿಶೀಲಿಸಿ ಅದರ ಆಧಾರದ ಮೇಲೆ ಅನ್ಯಕ್ರಾಂತ ಮಾಡಲಾಗಿದೆ. ಇದು ಈ ಜಮೀನಿಗೆ ಮಾತ್ರ ಅನ್ವಯವಾಗದು, ಇದೇ ರೀತಿ ಹಲವಾರು ಭೂಮಗಳಿಗೆ ಕಾನೂನಿನ ಪ್ರಕಾರವೇ ಅನ್ಯಕ್ರಾಂತ ಮಾಡಲಾಗಿದೆ ಎಂದರು.
ಸಂಬಂಧವಿಲ್ಲ :
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪಾರ್ವತಿ ಅವರಿಗೆ ಮಂಜೂರು ಮಾಡಿರುವ ೧೪ ನಿವೇಶನಗಳಿಗೂ, ಅನ್ಯಕ್ರಾಂತಕ್ಕೂ ಸಂಬಂಧವಿಲ್ಲ. ಒಂದು ವೇಳೆ ಅನ್ಯಕ್ರಾಂತ ಆಗದೆ ಇದ್ದರ ಸಹ ಕಾನೂನಿನ ಪ್ರಕಾರವೇ ಪಾರ್ವತಿ ಅವರಿಗೆ ೧೪ ನಿವೇಶನಗಳು ಸಿಗತ್ತಿದ್ದವು ಎಂದು ಜಿ.ಕುಮಾರ ನಾಯಕ್ ಸ್ಪಷ್ಟಡಡಿಸಿದರು.
key words: mp ̧ G. Kumaranaiķ muda ̧ lokayuktha ̧ congress ̧ raichur ̧
I have performed my duty under the law, I have not done anything wrong: MP G. Kumaranaik