MUDA ‘Bit of Land’:  “ತುಂಡು ಜಾಗ” ಕ್ಕೆ  ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ವಿಸ್ತರಣೆ.

MUDA Commissioner Raghunandan spoke to Just Kannada in this regard. Muda has already issued a public notice regarding the allotment of the bit of land. Applications were invited for the bit of land from December 26, 2024 and the last date to apply was January 25, 2025. But now, in order to make it convenient for the public, the date of submission of application has been extended by another one month i.e., February 25.

 

ಮೈಸೂರು, ಜ.೨೨,೨೦೨೫: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತುಂಡು ಜಾಗಕ್ಕೆ  ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕಡೆ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಮೊದಲು ಜ. ೨೫ ಕಡೆ ದಿನಾಂಕವಾಗಿತ್ತು. ಇದೀಗ ಇದನ್ನು ಫೆ. ೨೫ ರ ವರೆಗೂ ವಿಸ್ತರಿಸಲಾಗಿದೆ.

ಕಳೆದ ಕೆಲ ತಿಂಗಳುಗಳಿಂದ ಅನಪೇಕ್ಷಿತ ವಿಷಯಗಳಿಗಾಗಿ ಮಾಧ್ಯಮಗಳಲ್ಲಿ ಸುದ್ಧಿಯಲ್ಲಿದ್ದ ಮುಡಾ, ಇದೀಗ ಕಡೆಗೂ ಮೈ ಕೊಡವಿಕೊಂಡು ಸಾರ್ವಜನಿಕರ ಕಾರ್ಯಗಳತ್ತ ಗಮನ ಹರಿಸಿದೆ.  ಈ ಹಿಂದೆ ಕೆಲ ಕಾರಣಗಳಿಂದ ಸರಕಾರ ತುಂಡು ಭೂಮಿ ಮಂಜೂರಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ತುಂಡು ಭೂಮಿ ಮಂಜೂರಾತಿ ಪ್ರಕ್ರಿಯೆಗೆ ಮುಡಾ ಚಾಲನೆ ನೀಡಿದೆ.

ಈ ಸಂಬಂಧ ಮುಡಾ ಆಯುಕ್ತ ರಘುನಂದನ್‌ ಅವರು “ ಜಸ್ಟ್‌ ಕನ್ನಡ “ ಜತೆ ಮಾತನಾಡಿದರು…

ಈಗಾಗಲೇ ಮುಡಾ, ತುಂಡು ಭೂಮಿ ಮಂಜೂರಾತಿ ಸಂಬಂಧ ಸಾರ್ವಜನಿಕ ಪ್ರಕಟಣೆ ನೀಡಿದೆ. ೨೦೨೪ ರ ಡಿಸೆಂಬರ್‌ ೨೬ ರಿಂದ ತುಂಡು ಭೂಮಿ ಮಂಜುರಾತಿಗೆ ಅರ್ಜಿ ಆಹ್ವಾನಿಸಿದ್ದು, ಇದು ಜ.೨೫,೨೦೨೫ ರಂದು ಅರ್ಜಿ ಸಲ್ಲಿಸಲು ಕಡೆ ದಿನವಾಗಿತ್ತು. ಆದರೆ ಇದೀಗ ಸಾರ್ವಜನಿಕರಿಗೆ ಅನೂಕೂಲವಾಗಲಿ ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ಮತ್ತೆ ಒಂದು ತಿಂಗಳ ಅವಧಿಗೆ ಅಂದರೆ, ಫೆ. ೨೫ ರ ತನಕ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದರು.

ಅರ್ಜಿ ಜತೆಗೆ ಏನೇನು ಸಲ್ಲಿಸಬೇಕು..?

ತುಂಡು ಭೂಮಿಗೆ ಅರ್ಜಿ ಸಲ್ಲಿಸುವವರು, ಅರ್ಜಿಯೊಂದಿಗೆ ಮಂಜೂರಾತಿ ಪತ್ರ, ಶುದ್ಧ ಕ್ರಯಪತ್ರ, ಖಾತಾ ಪತ್ರ, ತಹಲ್‌ ವರೆವಿಗೂ ಇ.ಸಿ. (ಮಂಜೂರಾತಿ ದಿನಾಂಕದಿಂದ ಇಲ್ಲಿಯವರೆಗೂ) ಹಾಗೂ ಆಧಾರ್‌ ಪ್ರತಿ ಲಗತ್ತಿಸುವುದು ಕಡ್ಡಾಯ.

key words: MUDA ‘Bit of Land’, Last date, to apply, extended.

SUMMARY:

MUDA ‘Bit of Land’: Last date to apply for “piece of space” extended

MUDA Commissioner Raghunandan spoke to Just Kannada in this regard. Muda has already issued a public notice regarding the allotment of the bit of land. Applications were invited for the bit of land from December 26, 2024 and the last date to apply was January 25, 2025.

But now, in order to make it convenient for the public, the date of submission of application has been extended by another one month i.e., February 25.