ಕಲಬುರಗಿ,ಡಿಸೆಂಬರ್,4,2024 (www.justkannada.in): ಮುಡಾದಲ್ಲಿ 700 ಕೋಟಿಗೂ ಹೆಚ್ಚು ಹಗರಣ ಆಗಿದೆ ಎಂದು ಇಡಿಯೇ ಹೇಳಿದೆ. ಬಡವರ ಸೈಟ್ ಗಳು ಬ್ರೋಕರ್ ಗಳ ಪಾಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಮುಡಾ ಸೈಟ್ ಅಕ್ರಮವಾಗಿ ಬಂದಿದೆ ಆರೋಪದದಿಂದ ಹಿಂದೆ ಸರಿಯಲು ಸೈಟ್ ವಾಪಸ್ ನೀಡಿದ್ದಾರೆ. ಇಡಿಯೇ 700 ಕೋಟಿಗೂ ಹೆಚ್ಚು ಹಗರಣ ನಡೆದಿದೆ ಎಂದಿದೆ. ಬಡವರ ಸೈಟ್ ಗಳು ಬ್ರೋಕರ್ ಪಾಲಾಗಿವೆ ಎಂದು ಕಿಡಿಕಾರಿದರು.
ಮುಡಾದಲ್ಲಿ ಹಗರಣ ಆಗಿಲ್ಲ ಅಂತಾ ಸಿಎಂ ಹೇಳಿದರು. ನಾವು ಕೂಡ ಹೋರಾಟ ಮಾಡಿದ್ದೇವೆ. ಬಡವರ ಸೈಟ್ ಗಳು ಬ್ರೋಕರ್ ಗಳ ಮೂಲಕ ರಿಯಲ್ ಎಸ್ಟೇಟ್ ಗಳ ಪಾಲಾಗಿವೆ. ಬಡವರ ಸೈಟ್ ಗಳು ಶ್ರೀಮಂತರ ಪಾಲಾಗಿವೆ. ಮೊದಲ ಹಂತದಲ್ಲಿ ಇ.ಡಿ 700 ಕೋಟಿಯಲ್ಲಿ ಅವ್ಯವಹಾರ ಆಗಿದೆ ಅಂತ ಹೇಳಿದೆ. ಕಾನೂನು ಬಾಹಿರವಾಗಿ ಸೈಟ್ ಗಳನ್ನ ಹಂಚಿಕೆ ಮಾಡಲಾಗಿದೆ ಅನ್ನೋದು ಇ.ಡಿ ವರದಿ ನೀಡಿದೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
Key words: 700 crore, scam, Muda, BY Vijayendra