ಮೈಸೂರು,ನವೆಂಬರ್,16,2024 (www.justkannada.in): ಮೈಸೂರು ಮುಡಾದಲ್ಲಿ 50:50 ಹಗರಣದ ನಡುವೆ ಮಹತ್ತರ ಬೆಳವಣಿಗೆಯಾಗಿದ್ದು, ಮುಡಾದಲ್ಲಿ ಕಾನೂನು ವಿರುದ್ಧ ಮಾಡುತ್ತಿದ್ದ ಖಾತೆ, ಕಂದಾಯ ರದ್ದುಗೊಳಿಸಲಾಗಿದೆ.
ನಗರಾಭಿವೃದ್ದಿ ಕಾಯ್ದೆಯ ಪ್ರಕಾರ ಕೆಲಸ ಮಾಡಲು ಮೈಸೂರು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ನಗರಾಭಿವೃದ್ದಿ ಕಾಯ್ದೆಯ ಪ್ರಕಾರ ಮುಡಾದಲ್ಲಿ ಖಾತೆ ಕಂದಾಯ ಮಾಡುವಂತಿಲ್ಲ. ಹೀಗಿದ್ದರೂ ಮುಡಾದಲ್ಲಿ ಅಧಿಕಾರಿಗಳು ಖಾತೆ ಕಂದಾಯ ಮಾಡುತ್ತಿದ್ದರು. ಇದೀಗ ಇದನ್ನು ರದ್ದುಗೊಳಿಸಲಾಗಿದೆ.
ಸದ್ಯ ಆಯಾ ವ್ಯಾಪ್ತಿಯ ಕಾರ್ಪೋರೇಶನ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗೆ ಅಧಿಕಾರ ಹಸ್ತಾಂತರ ಮಾಡಲಾಗಿದ್ದು, ಮುಡಾ ಸೈಟುಗಳ ಖಾತೆ ಕಂದಾಯ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ . ಈ ಮೂಲಕ ಮುಡಾದಲ್ಲಿ ಇಷ್ಟು ದಿನ ಮಾಡುತ್ತಿದ್ದ ಖಾತೆ ಕಂದಾಯ ಸೇರಿ ಇತರ ಸೇವೆ ಸ್ಥಗಿತವಾಗಿದೆ. ಕೇವಲ ಡೆವಲಪ್ಮೆಂಟ್ ವರ್ಕ್ ಸೇವೆ ಲಭ್ಯವಿರಲಿದೆ.
Key words: MUDA, cancel, illegal , account, revenue