ಸಿಎಂ ವಿರುದ್ದದ ಮುಡಾ ಕೇಸ್ ಅನ್ನೂ ಸಿಬಿಐಗೆ ನೀಡಲಿ- ಬಿವೈ ವಿಜಯೇಂದ್ರ ತಿರುಗೇಟು

ಬೆಳಗಾವಿ,ಡಿಸೆಂಬರ್,16,2024 (www.justkannada.in): ತಮ್ಮ ವಿರುದ್ದ 150 ಕೋಟಿ ಆಮಿಷ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ಇಂದು ಸದನದಲ್ಲಿ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಕೇಸ್ ಅನ್ನೂ ಸಿಬಿಐ ತನಿಖೆಗೆ ನೀಡಲಿ ಎಂದು ಆಗ್ರಹಿಸಿದರು.

ಇಂದು ಚಳಿಗಾಲದ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ 150 ಕೋಟಿ ರೂ. ಆಮಿಷ ಒಡ್ಡಿದ ಆರೋಪ ಕುರಿತು ಚರ್ಚೆಗೆ ಬಂತು. ಸದನದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಸದನದಲ್ಲಿ ನಾನು ಇಲ್ಲದಿದ್ದಾಗ ನನ್ನ ವಿರುದ್ದ ಆರೋಪ ಮಾಡಿದ್ದಾರೆ.  ಸಿಬಿಐ ತನಿಖೆ ಮಾಡಿಸಲಿ ಎಂದು ಸಿಎಂ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಕೇಂದ್ರ ತನಿಖೆ ಸಂಸ್ಥೆ ಮೇಲೆ ವಿಶ್ವಾಸ ಬಂದಿರೋದು ಸಂತಸ . ಅನ್ವರ್ ಮಾಣಿಪ್ಪಾಡಿ ಹೇಳಿಕೆಯೂ ಬಗ್ಗೆಯೂ ತನಿಖೆಯಾಗಲಿ ಎಂದರು.

ಸಿಎಂ ಸಿದ್ದರಾಮಯ್ಯ  ವಿರುದ್ದ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಮುಡಾ ಹಗರಣವನ್ನೂ  ಸಿಬಿಐ ತನಿಖೆಗೆ ನೀಡಲಿ. ಸಿಬಿಐಗೆ ನೀಡಲು ಸಿಎಂಗೆ ಪರಮಾಧಿಕಾರವಿದೆ. ತಪ್ಪು ಮಾಡದಿದ್ದರೇ ಸಿಎಂ ಸಿದ್ದರಾಮಯ್ಯ 14 ಸೈಟ್ ಯಾಕೆ ವಾಪಸ್ ಕೊಟ್ಟರು

ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ  150 ರೂ. ಕೋಟಿ ಆಮಿಷ ಆರೋಪ,  ಪ್ರಿಯಾಂಕ್ ಖರ್ಗೆ ಸಭ್ಯಸ್ಥನಂತೆ ಮಾತನಾಡುತ್ತಾರೆ ಸಚಿವರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ವಕ್ಫ್ ಬೋರ್ಡ್ ಗೂ ವಿಜಯೇಂದ್ರಗೂ ಏನು ಸಂಬಂಧ..? ಎಂದು ಪ್ರಶ್ನಿಸಿದರು.

Key words: Muda case, CBI, BY Vijayendra, Session