ಮೈಸೂರು,ಡಿಸೆಂಬರ್,7,2024 (www.justkannada.in): ಮುಡಾ ಹಗರಣದಲ್ಲಿ ಸಚಿವ ಭೈರತಿ ಸುರೇಶ್ ಪಾತ್ರವಿದೆ. ಇಷ್ಟೊಂದು ದೊಡ್ಡ ಹಗರಣವಾಗಿದ್ದರೂ ಮಾಜಿ ಆಯುಕ್ತರ ವಿರುದ್ಧ ಕ್ರಮ ಏಕೆ ಆಗಿಲ್ಲ. ಇದಕ್ಕೆಲ್ಲ ಸರ್ಕಾರದ ಕುಮ್ಮಕ್ಕು ಇದೆ ಎಂದು ಮಾಜಿ ಶಾಸಕ ಎಲ್.ನಾಗೇಂದ್ರ ಗಂಭೀರ ಆರೋಪ ಮಾಡಿದರು.
ಮುಡಾ ಹಗರಣ ಸಂಬಂಧ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿದರು.
ಪಡುವಾರಹಳ್ಳಿ ನಾಗರಾಜುಗೆ 53 ಸೈಟ್ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ನಾಗೇಂದ್ರ, ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಅಮಾಯಕನಿಗೆ ಸೈಟ್ ಇರುವುದೇ ಗೊತ್ತಿಲ್ಲ. ಚಾಮುಂಡೇಶ್ವರಿ ಸೌಹಾರ್ದ ಸಮಿತಿಯ 48 ಸೈಟ್ ವಾಪಸ್ ಪಡೆದಿದ್ದಾರೆ. ಸಿಎಂ ಪತ್ನಿ 14 ಸೈಟ್ ನೀಡಿದ್ದಾರೆ. ಉಳಿದ ಸೈಟ್ ಗಳ ವಾಪಸಾತಿ ಯಾವಾಗ? ಎಂದು ಪ್ರಶ್ನಿಸಿದರು.
928 ಸೈಟ್ ಗಳ ವರದಿ ಈಗಾಗಲೇ ಬಂದಿದೆ. ಯಾಕೆ 928 ಸೈಟ್ ಗಳನ್ನ ವಾಪಸ್ ಪಡೆದುಕೊಂಡಿಲ್ಲ ಒಬ್ಬೊಬ್ಬರ ಹೆಸರಿನಲ್ಲಿ ತಲಾ 20,30,50,100 ಸೈಟ್ ಗಳನ್ನ ನೀಡಿದ್ದಾರೆ. ಕೇವಲ 48 ಸೈಟ್ ರದ್ದು ಮಾಡಿ ಸತ್ಯ ಸಂತರು ಎಂದು ಹೇಳಿಕೊಳ್ಳಬೇಡಿ ಎಂದು ಸರ್ಕಾರಕ್ಕೆ ಎಲ್.ನಾಗೇಂದ್ರ ಚಾಟಿ ಬೀಸಿದರು.
Key words: Muda case, Former MLA, L. Nagendra