ಮುಡಾ ಕೇಸ್ : ಲೋಕಾಯುಕ್ತ ವಿಚಾರಣೆ ಎದುರಿಸಿ ಹೊರ ಬಂದ ಮಾಜಿ ಆಯುಕ್ತ

ಮೈಸೂರು,ನವೆಂಬರ್,28,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಮುಂದುವರೆದಿದ್ದು  ಈ ನಡುವೆ ಇಂದು ಮುಡಾ ಮಾಜಿ ಆಯುಕ್ತ ಕಾಂತರಾಜು ವಿಚಾರಣೆಗೆ ಹಾಜರಾಗಿದ್ದಾರೆ.

ಲೋಕಾಯುಕ್ತ ಎಸ್.ಪಿ ಟಿಜೆ ಉದೇಶ್ ರಿಂದ ವಿಚಾರಣೆ ನಡೆದಿದ್ದು,   ಲೋಕಾಯುಕ್ತ ವಿಚಾರಣೆ ಮುಗಿಸಿ ಹೊರ ಬಂದ ಬಳಿಕ ಮಾತನಾಡಿದ ಮುಡಾ ಮಾಜಿ ಆಯುಕ್ತ ಕಾಂತರಾಜು, ನನ್ನ ಅವಧಿಯ ಮುಡಾ ವ್ಯವಹಾರಗಳ ಬಗ್ಗೆ ವಿಚಾರಣೆಗೆ ಕರೆದಿದ್ದರು. 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ. ಆಗ ಪಾರ್ವತಿಯವರು ಪಡೆದಿದ್ದ ಭೂಮಿ ಪರಿಹಾರದ ಬಗ್ಗೆ ವಿಚಾರಣೆ ನಡೆದಿದೆ.

2017 ರ ಪ್ರಾಧಿಕಾರ ಸಭೆಯಲ್ಲಿ ಅಭಿವೃದ್ಧಿ ಪಡಿಸದ ಭೂಮಿ ಕೊಡಲು ತೀರ್ಮಾನ ಮಾಡಿದ್ದೆವು. ಇದೆಲ್ಲದರ ಬಗ್ಗೆ ವಿಚಾರಣೆ ಆಗಿದೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಯಾವುದನ್ನ ಹೆಚ್ಚು ಹೇಳಲಾರೆ. ಅಧಿಕಾರಿಯಾಗಿ ನನಗೂ ಕೆಲವು ನಿರ್ಬಂಧಗಳು ಇವೆ ಎಂದಿದ್ದಾರೆ.

Key words: Muda case, Former commissioner, Lokayukta