ಮೈಸೂರು, ಅಕ್ಟೋಬರ್,17,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮರೀಗೌಡ ತಲೆದಂಡವಾಗಿದೆ. ಇನ್ನು ಇಬ್ಬರು ಅಧಿಕಾರಿಗಳ ತಲೆದಂಡ ಯಾವಾಗ? ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಪ್ರಶ್ನಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಶಾಸಕ ಶ್ರೀವತ್ಸ, ಮುಡಾ ಹಗರಣ ಸಂಬಂಧ ಮುಡಾದ ಆಯುಕ್ತರಾಗಿದ್ದ ನಟೇಶ್ , ದಿನೇಶ್ ರಕ್ಷಣೆ ಆಗಿದೆ. ಕೂಡಲೇ ಸರ್ಕಾರ ಇಬ್ಬರನ್ನ ವಜಾ ಮಾಡಲೇಬೇಕು. ಮುಡಾ ಹಗರಣ ಸಮಗ್ರ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಪ್ರಕರಣ ಮುಗಿಯುವ ತನಕ ಸಬ್ ರಿಜಿಸ್ಟ್ರರ್ ನಲ್ಲಿ ಆಸ್ತಿ ಪರಭಾರೆ ನಿಲ್ಲಿಸಿ. ಮುಡಾದ 890 ಸೈಟ್ ಗಳನ್ನ ವಾಪಸ್ ಪಡೆಯಿರಿ. 50:50 ಹಗರಣದ ಎಲ್ಲಾ ಸೈಟ್ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
ಮರೀಗೌಡ ತಲೆದಂಡ ಆಗಿರುವುದು ಸತ್ಯಕ್ಕೆ ಸಿಕ್ಕ ಜಯ. ಮೊದಲ ಹಂತದಲ್ಲಿ ನಮಗೆ ಗೆಲುವು ಸಿಕ್ಕಿದೆ. ಪ್ರಕರಣದಲ್ಲಿ ಸಿಎಂ ಕೂಡ ಭಾಗಿಯಾಗಿದ್ದರೂ ಮನವಿ ಸಲ್ಲಿಸಿರುವೆ. ಅವರಿಂದ ನ್ಯಾಯ ಸಿಗದಿದ್ದರೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವೆ ಎಂದು ಶಾಸಕ ಶ್ರೀವತ್ಸ ತಿಳಿಸಿದರು.
Key words: muda case, Marigowda, resignation, MLA, Srivatsa