ಮುಡಾ ಕೇಸ್: ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿರುವುದಕ್ಕೆ ಸಚಿವರಿಂದ ಆಕ್ರೋಶ

ಬೆಂಗಳೂರು,ಡಿಸೆಂಬರ್,4,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಇಡಿ ಪತ್ರ  ಬರೆದ ಹಿನ್ನೆಲೆ ಸಚಿವರಾದ ಪರಮೇಶ್ವರ್ , ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗೃಹ ಸಚಿವ ಪರಮೇಶ್ವರ್,ಸ ಚಿವ ಪ್ರಿಯಾಂಕ್ ಖರ್ಗೆ ಶಾಸಕ ಪೊನ್ನಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಗೃಹ ಸಚಿವ ಪರಮೇಶ್ವರ್ ಮಾತನಾಡಿ ಮೂಡಾ ಕೇಸ್ ನಲ್ಲಿ ಲೋಕಾಯುಕ್ತರು ತನಿಖೆ ಮಾಡ್ತಿದ್ದಾರೆ. ಅವರು ತನಿಖೆಯನ್ನ ಮುಂದುವರಿಸಿದ್ದಾರೆ. ಅವರು ವರದಿಯನ್ನ‌ಕೋರ್ಟ್ ಗೆ ಸಬ್ಮಿಟ್ ಮಾಡಿಲ್ಲ. ಇಂಟರಿಮ್ ವರದಿಯನ್ನ ಕೊಟ್ಟಿಲ್ಲ. ಇನ್ವೆಸ್ಟಿಗೇಶನ್ ಮುಂದುವರಿದಿದೆ. ಈ ವೇಳೆ ಇಡಿ ಲೋಕಾಯುಕ್ತಕ್ಕೆ ಪತ್ರ ಬರೆದಿದೆ. ಅನೇಕವಿಷಯಗಳನ್ನ ಪ್ರಸ್ತಾಪ ಮಾಡಿದ್ದಾರೆ. ಅವರು ಮಾಡಿರುವ  ತನಿಖೆ ಅಂಶ ಪ್ರಸ್ತಾಪಿಸಿದ್ದಾರೆ. ಕಾನೂನಾತ್ಮಕವಾಗಿ ನೋಡೋದಾದ್ರೆ ಒಂದೇ ವೇಳೆ ಎರಡು ತನಿಖೆಗೆ ಅವಕಾಶ ಇಲ್ಲ. ಕೇಂದ್ರದ ಏಜೆನ್ಸಿ ಇಡಿ ಲೋಕಾಯುಕ್ತ ಪತ್ರ ಬರೆದಿದ್ದಾರೆ. ಕೆಲವು ವಿಷಯದಲ್ಲಿ ಫೈನಲ್ ಗೆ ಬಂದಿದ್ದಾರೆ. ಆ ಪತ್ರದಲ್ಲಿ ಸೂಚನೆ ಮಾಡಿದ್ದಾರೆ. ಇದರರ್ಥ ತನಿಖೆಗೆ ಅಡ್ಡ ಬರ್ತಿದ್ದಾರೆ ಅನ್ನೋದು ಈ ರೀತಿ ತನಿಖೆ ಮಾಡಿ ಅಂತ ಇಂಡೈರೆಕ್ಟ್ ಡೈರೆಕ್ಷನ್ ಕೊಟ್ತಿದ್ದಾರೆ. ಇದು ಕಾನೂನಿಗೆ ವಿರುದ್ಧ ನಡೆದುಕೊಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಿಬಿಐ,ಐಟಿ,ಇಡಿ ಕೇಂದ್ರದ ಕೈಗೊಂಬೆಗಳು, ನಾವು ಪದೇ ಪದೇ ಇದನ್ನ ಹೇಳ್ತಿದ್ದೇವೆ. ಎಲ್ಲೆಲ್ಲಿ ಬಿಜೆಪಿ ದುರ್ಬಲವಾಗಿ ಸಂಕಷ್ಟದಲ್ಲಿದೆ. ಆ ರಾಜ್ಯಗಳಲ್ಲಿ ಐಟಿ,ಇಡಿ,ಸಿಬಿಐ ಬಿಡ್ತಿದ್ದಾರೆ. ದೆಹಲಿ,ತಮಿಳುನಾಡು, ಕೇರಳ, ಇಲ್ಲಿ ಬಳಸ್ತಿದ್ದಾರೆ. ಇದು ರಾಜಭವನ ಬಳಕೆಗೂ ಹೋಗಿದೆ. ಇಡಿಯವರು ಹೇಗೆ ಎಂಟ್ರಿಯಾದ್ರು ಗೊತ್ತಿಲ್ಲ. ಮನಿಲ್ಯಾಂಡ್ರಿಂಗ್ ಆಗುತ್ತೆ ಆಗ ಇವರು ಬರಬೇಕು. ಲೋಕಾಯುಕ್ತ ಯಾವಾಗ ಎಫ್ ಐಆರ್ ಆಗುತ್ತೆ. ಅದರ ಬೆಳಗ್ಗೆಯೇ ಇಡಿ ಎಂಟ್ರಿಯಾಗುತ್ತದೆ. ನಾವು ಇಡಿಯವರ ಸಹಾಯ ಕೇಳಿಲ್ಲ. ಇದರಲ್ಲಿ ತಪ್ಪಿಲ್ಲ ಅಂತ ಸಿಎಂ ಹೇಳಿದ್ದಾರೆ. ಇಷ್ಟು ತಿಂಗಳು ತನಿಖೆ ಮಾಡಿದ್ರೂ  ಅವರಿಗೆ ಏನು ಸಿಕ್ಕಿಲ್ಲ. ಸೈಟ್ ವಾಪಸ್ ಆದ ಮೇಲೆ ಕೇಸೇ ಇಲ್ಲ. ಹಾಗಾಗಿ ಇಂತಹ ಲೆಟರ್ ಲೀಕ್ ಮಾಡ್ತಿದ್ದಾರೆ. ಇದು ಸ್ಟಿಂಗ್ ಮಾಡಿ ತೆಗೆದ ಪತ್ರವಲ್ಲ. ಬೇಕೆಂದೇ ಮಾಡಿರುವ ಹುನ್ನಾರ. ಹೀಗೆ ತನಿಖೆ ಆಗಬೇಕು ಅಂತ ಇವರು ಹೇಳಿದಂತಿದೆ ಎಂದರು.

ನಾಳೆ ವಿಚಾರಣೆ ಇದೆ. ಇವತ್ತು ದೆಹಲಿಯಲ್ಲಿ ಲೀಕ್ ಮಾಡಿದ್ದಾರೆ. ಈ ಪತ್ರವನ್ನ ಕೆಲವು ಮಾಧ್ಯಮ ಕರೆಸಿ ಲೀಕ್ ಮಾಡಿದ್ದಾರೆ. ಇದನ್ನ ಮಾನ್ಯ ಹೈಕೋರ್ಟ್ ಗಮನಿಸಬೇಕು. ಈ ಲೆಟರ್ ಹೇಗೆ ಸೋರಿಕೆಯಾಯ್ತು? ಸರ್ದಾರ್ ಪಟೇಲ್ ನಂತರ ಅಮಿತ್ ಶಾ ಬಲಿಷ್ಠ ಅಂತಾರೆ. ಬಿಜೆಪಿ ನಾಯಕರು ಹಾಗಂತ ಹೇಳ್ತಾರೆ ಇಲ್ಲಿ ಈ ಪತ್ರ ಲೀಕ್ ಆಗಿದ್ದು ಹೇಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

Key words: Muda case, Ministers, ED,  letter