ಮೈಸೂರು,ಸೆಪ್ಟಂಬರ್,15,2021(www.justkannada.in): ಕಟ್ಟಡ ನಿರ್ಮಿಸುವ ಸಮಯದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ ಕಟ್ಟಡ ಪೂರ್ಣಗೊಳಿಸಿರುವ ಹಾಗೂ ಹಲವಾರು ವರ್ಷಗಳಿಂದ ದಾಖಲೆ ಪೂರ್ಣಗೊಳಿಸಲು ಕಾಯುತ್ತಿರುವ ಸಾರ್ವಜನಿಕರಿಗೆ ದಾಖಲೆ ನೀಡುವ ನಿಟ್ಟಿನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಶಾಶ್ವತ ಪರಿಹಾರದ ನಿರ್ಣಯ ಕೈಗೊಂಡಿದೆ.
ಹೌದು, ಅಂತಹ ಕಟ್ಟಡಗಳಿಗೆ ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರ” “Occupancy Certificate ಅನ್ನು ದುಪ್ಪಟ್ಟು ಕರ ವಿಧಿಸಿ ನೀಡಲು ನಿರ್ಣಯಿಸಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆ ಹೊರಡಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಕಟ್ಟಡ ನಕ್ಷೆ ಅನುಮೋದನೆಯಂತೆ ಕಟ್ಟಡ ನಿರ್ಮಿಸದೇ ಸಣ್ಣಪುಟ್ಟ ಬದಲಾವಣೆ ಮಾಡಿ ಕಟ್ಟಡ ನಿರ್ಮಿಸಿರುವ ಕಾರಣಗಳಿಂದ ಸಾಕಷ್ಟು ವರ್ಷಗಳಿಂದ ಕಟ್ಟಡ ಪೂರ್ಣಗೊಂಡ ವರದಿ ಪಡೆಯಲಾಗದೇ, ಪ್ರಾಧಿಕಾರದ ಕಛೇರಿಗೆ ಮೇಲಿಂದ ಮೇಲೆ ಸಾರ್ವಜನಿಕರು ಅಲೆದಾಡುತ್ತಿರುವುದನ್ನು ಹಾಗೂ ಇದಕ್ಕೆ ಸೂಕ್ತ ಪರಿಹಾರ ಮಾರ್ಗವಿಲ್ಲದೇ ದಾಖಲಾತಿಗಳನ್ನು ಪೂರ್ಣಗೊಳಿಸಲಾಗದೇ ಕಷ್ಟ ಅನುಭವಿಸುತ್ತಿರುವುದನ್ನು ಪ್ರಾಧಿಕಾರ ಮನಗಂಡಿದೆ.
ಹೀಗಾಗಿ ಕಟ್ಟಡ ನಿರ್ಮಿಸುವ ಸಮಯದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ ಕಟ್ಟಡ ಪೂರ್ಣಗೊಳಿಸಿರುವ ಹಾಗೂ ಹಲವಾರು ವರ್ಷಗಳಿಂದ ದಾಖಲೆ ಪೂರ್ಣಗೊಳಿಸಲು ಕಾಯುತ್ತಿರುವ ಸಾರ್ವಜನಿಕರಿಗೆ, ಅಂತಹ ಕಟ್ಟಡಗಳಿಗೆ ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರ ನೀಡಲು ನಿರ್ಧರಿಸಲಾಗಿದೆ. ಆದರಂತೆ ನಕ್ಷೆಯಂತೆ ಕಟ್ಟಡ ನಿರ್ಮಿಸದೇ ಸಣ್ಣಪುಟ್ಟ ಬದಲಾವಣೆ ಮಾಡಿ ಕಟ್ಟಡ ನಿರ್ಮಿಸಿರುವ ಕಟ್ಟಡಗಳಿಗೆ ಕಟ್ಟಡ ಪೂರ್ಣಗೊಂಡ ವರದಿ ವರದಿ ಪಡೆಯಲಾಗದೇ ಅತಂತ್ರ ಸ್ಥಿತಿಯಲ್ಲಿರುವ ಸಾರ್ವಜನಿಕರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ‘ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರ’ ವನ್ನು ಪಡೆದು ದಾಖಲಾತಿಗಳನ್ನು ಪೂರ್ಣಗೊಳಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Muda- decision -issue – certificate of residence