ದಶಕಗಳಿಂದ ಖಾಲಿ ಉಳಿದಿದ್ದ ಶಾಲಾ ಆವರಣದಲ್ಲಿ ನೂತನ ಕಾಂಪ್ಲೆಕ್ಸ್ ನಿರ್ಮಿಸಲು ಮುಂದಾದ MUDA

 

ಮೈಸೂರು, ಮೇ 10, 2019 : (www.justkannada.in news) : ನಗರದ ಹೃದಯ ಭಾಗದಲ್ಲಿ ಕಳೆದ ಒಂದುವರೆ ದಶಕಗಳಿಂದ ಖಾಲಿ ಉಳಿದಿದ್ದ ಶಾಲಾ ಆವರಣದಲ್ಲಿ ಮೈಸೂರು ನಗರಾಭಿವೃಧ್ಧಿ ಪ್ರಾಧಿಕಾರ ನೂತನ ಕಾಂಪ್ಲೆಕ್ಸ್ ನಿರ್ಮಿಸಲು ಮುಂದಾಗಿದೆ.

ನಗರದ ಇಟ್ಟಿಗೆಗೂಡು ಪ್ರದೇಶದಲ್ಲಿದ್ದ ಕನ್ನಡ ಶಾಲೆ ಕಳೆದ ಕಳೆದ 16-18 ವರ್ಷಗಳ ಹಿಂದೆ ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಿತು. ಇದಾದ ಬಳಿಕ ಆ ಜಾಗ ಹಾಗೆಯೇ ಖಾಲಿ ಉಳಿದಿತ್ತು. ಸಂಜೆ ವೇಳೆ ಅದು ಕಿಡಿಗೇಡಿಗಳಿಗೆ ಅಡ್ಡವಾಗಿ ಮಾರ್ಪಾಡಾಗಿತ್ತು. ನಗರದ ಪ್ರಮುಖ ಸ್ಥಳದಲ್ಲಿರುವ ಈ ಜಾಗವನ್ನು ಅಭಿವೃದ್ಧಿ ಪಡಿಸಿ ಮುಡಾಗೆ ಆರ್ಥಿಕ ಲಾಭ ತರುವ ಉದ್ದೇಶದಿಂದ ಇದೀಗ ಅಲ್ಲಿ ಕಾಂಪ್ಲೆಕ್ಸ್ ಕಟ್ಟಲು ಸರಕಾರ ಮುಂದಾಗಿದೆ.

ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮುಡಾ ಆಯುಕ್ತ ಕಾಂತರಾಜ್ ಮಾತನಾಡಿ ಹೇಳಿದಿಷ್ಟು..
ಕಳೆದ ಒಂದುವರೆ ದಶಕದಿಂದ ಕನ್ನಡ ಶಾಲೆ ಬಾಗಿಲು ಮುಚ್ಚಿ ಆವರಣ ಖಾಲಿ ಬಿದ್ದಿತ್ತು. ಆ ಜಾಗವನ್ನು ಅತೀಕ್ರಮಕಾರರಿಂದ ರಕ್ಷಿಸುವ ಜತೆಗೆ ಮುಡಾಗೆ ಆದಾಯ ತಂದು ಕೊಡುವ ಉದ್ದೇಶದಿಂದ ಅಲ್ಲಿ ಹೊಸದಾಗಿ ಕಾಂಪ್ಲೆಕ್ಸ್ ಕಟ್ಟಲು ಈ ಹಿಂದೆಯೇ ನಿರ್ಧಾರಿ ಯೋಜನೆಗೂ ಅಂಗೀಕಾರ ನೀಡಲಾಗಿತ್ತು. ಇದೀಗ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಸ್ಪಷ್ಟನೆ :

ಮುಡಾ ಯಾವುದೇ ಕನ್ನಡ ಶಾಲೆಯನ್ನು ಮುಚ್ಚಿ ಅಲ್ಲಿ ಕಾಂಪ್ಲೆಕ್ಸ್ ಕಟ್ಟುತ್ತಿಲ್ಲ. ಅಲ್ಲಿದ್ದ ಕನ್ನಡ ಶಾಲೆ ಮುಚ್ಚಿ ಒಂದುವರೆ ದಶಕಗಳೇ ಕಳೆದಿವೆ. ಜತೆಗೆ ಆ ಕಟ್ಟಡ ಪಾರಂಪರಿಕ ಕಟ್ಟಡವಲ್ಲ ಎಂದು ಮುಡಾ ಆಯುಕ್ತ ಕಾಂತರಾಜು ಸ್ಪಷ್ಟಪಡಿಸಿದರು.
ಈ ಬಗ್ಗೆ ಅಗತ್ಯವಾದಲ್ಲಿ ಮತ್ತೊಮ್ಮೆ ಪಾರಂಪರಿಕ ಇಲಾಖೆ ಜತೆಗೆ ಚರ್ಚಿಸಿ ಪುನರ್ ಪರಿಶೀಲಿಸಿ ಆನಂತರ ಮುಂದಿನ ಕ್ರಮ ಜರುಗಿಸುವ ಆಶ್ವಾಸನೆ ನೀಡಿದರು.

 

MUDA-MYSORE-KANNADA-SCHOOL