ಮುಡಾ ಆಯುಕ್ತರಾಗಿ ಜಿ.ಟಿ. ದಿನೇಶ್ ಕುಮಾರ್ ಅಧಿಕಾರ ಸ್ಚೀಕಾರ.

ಮೈಸೂರು,ಜನವರಿ,17,2022(www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ. ದಿನೇಶ್ ಕುಮಾರ್ ಇಂದು  ಅಧಿಕಾರ ಸ್ಚೀಕಾರ ಮಾಡಿದರು.

ಡಾ. ಡಿ.ಬಿ. ನಟೇಶ್ ವರ್ಗಾವಣೆಯಿಂದ ತೆರವಾಗಿದ್ದ ಮುಡಾ ಆಯುಕ್ತ ಸ್ಥಾನಕ್ಕೆ ಜಿ.ಟಿ. ದಿನೇಶ್ ಕುಮಾರ್ ನೇಮಕವಾಗಿದ್ದಾರೆ. ಇಂದು ಬೆಳಿಗ್ಗೆ ಮುಡಾಕ್ಕೆ ಆಗಮಿಸಿದ ನೂತನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ರನ್ನ ಮುಡಾ ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು.

ನಂತರ ಜಿ.ಟಿ ದಿನೇಶ್ ಕುಮಾರ್ ಕಡತಗಳಿಗೆ ಸಹಿ ಹಾಕಿ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮೈಸೂರಿಗೆ ಬಂದು ಕೆಲಸ ಮಾಡಬೇಕೆಂಬುದು ಪ್ರತಿಯೊಬ್ಬ ಅಧಿಕಾರಿಗಳ ಕನಸು. ನಾನು ಕೂಡ ಅದೇ ಆಸೆಯಿಂದ ಬಂದಿದ್ದೇನೆ. ನಾನು ಈಗಷ್ಟೇ ಅಧಿಕಾರ ಸ್ಚೀಕರಿಸಿದ್ದೇನೆ. ಮುಡಾ ಬಗ್ಗೆ ತಿಳಿದು ಮಾತನಾಡುವೆ. ಉತ್ತಮ ಕೆಲಸ ಕಾರ್ಯಗಳಾಗಬೇಕಾದರೆ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಸಮನ್ವಯ ಬಹಳ ಮುಖ್ಯ. ನಾನು ಆ ಸಮನ್ವಯತೆಯೊಂದಿಗೆ ಕೆಲಸ ಮಾಡುತ್ತೇನೆ‌ ಎಂದರು.

ಬೆಂಗಳೂರಿನ ಬಳಿಕ ಅಭಿವೃದ್ಧಿ ಹೊಂದುತ್ತಿರುವ ಎರಡನೇ ಮಹಾ‌ನಗರ ಮೈಸೂರು. ಸಾಕಷ್ಟು ಖಾಸಗಿ ಬಡಾವಣೆಗಳು ರೂಪಿತವಾಗುತ್ತಿವೆ. ಕೆಲಸಗಳ ಮಧ್ಯೆ ಸವಾಲುಗಳು ಇದ್ದೇ ಇರುತ್ತದೆ. ನಾನು ಅವೆಲ್ಲವನ್ನು ನಿಭಾಯಿಸುವೆ ಎಂದು ನೂತನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್  ವಿಶ್ವಾಸ ವ್ಯಕ್ತಪಡಿಸಿದರು.

ENGLISH SUMMARY…

G.T. Dinesh Kumar takes over charge as new MUDA Commissioner
Mysuru, January 17, 2022 (www.justkannada.in): G.T. Dinesh Kumar has taken over charge as the new Chairman of the Mysore Urban Development Authority (MUDA).
He replaced Dr. D.B. Natesh, who was transferred recently. G.T. Dinesh Kumar took over the charge today morning. He was welcomed by the MUDA officials.
Speaking to the media persons on the occasion he said, “It is the dream of every officer to work in Mysuru. I also have come here with the same desire. I have taken charge just now. I will speak to you after studying about MUDA. It is my personal view that if any agency or organization has to work well, coordination between the officer, staff, and public is important. I wish I will get the required coordination from all the people concerned.”
“Mysuru is the second city of the State in terms of swift development. Several new layouts have come up here. Challenges exist everywhere and in all types of work. I hope that I will face them properly,” he added.
Keywords: MUDA/ New Commissioner/ G.T. Dinesh Kumar/ takes charge

Key words: Muda – new-Commissioner- Dinesh Kumar