ಮೈಸೂರು,ಸೆಪ್ಟಂಬರ್,22,2022(www.justkannada.in): ರಸ್ತೆ ಅಭಿವೃದ್ಧಿಪಡಿಸುವ ನೆಪದಲ್ಲಿ ಗಂಧದ ಮರಗಳಿಗೆ ಕೊಡಲಿ ಹಾಕಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಯಡವಟ್ಟು ಬಯಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 5 ನೇ ವಲಯ ಕಚೇರಿ ಅಧಿಕಾರಿಗಳ ಎಡವಟ್ಟಿಗೆ ಗಂಧದ ಮರಗಳು ನೆಲಕಚ್ಚಿವೆ. ರಸ್ತೆ ಅಭಿವೃದ್ದಿ ನೆಪದಲ್ಲಿ ಗಂಧದ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಮೈಸೂರಿನ ಮೇಟಗಳ್ಳಿ ಬಡಾವಣೆ ರೈಲ್ವೆ ಟ್ರಾಕ್ ಬಳಿ 60 ಅಡಿ ರಸ್ತೆ ಅಭಿವೃದ್ದಿಪಡಿಸಲಾಗುತ್ತಿದ್ದು, ಈ ವೇಳೆ ರಸ್ತೆ ಪಕ್ಕದಲ್ಲಿ ಬೆಳೆದಿದ್ದ ಕುರುಚಲು ಸಸ್ಯಗಳನ್ನ ತೆರುವುಗೊಳಿಸುವ ಸಂಧರ್ಭದಲ್ಲಿ ಗಂಧದ ಮರಗಳನ್ನೂ ಸಹ ಕಡಿಯಲಾಗಿದೆ.
ಈ ಕುರಿತು RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Key words: Muda-Sandalwood -trees- road development