MUDA SCAM: 50:50 ಅನುಪಾತದ ನಿವೇಶನಗಳನ್ನು ಸರಕಾರ ಹಿಂಪಡೆಯಲಿದೆ: ಸುಳಿವು ನೀಡಿದ ಕೃಷಿ ಸಚಿವ.

MUDA SCAM: Govt will take back plots in 50:50 ratio: Agriculture Minister

ಮೈಸೂರು, ಅ.05,2024: (www.justkannada.in news) ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ನಿವೇಶನ ವಾಪಸ್ಸು ನೀಡಿದ್ದಾರೆ. ಆದರೆ ತನಿಖೆ ನಿಲ್ಲಿಸಿ ಅಂತಾ ಹೇಳಿಲ್ಲ. ಸಿದ್ದರಾಮಯ್ಯ ಹಾಗೂ ಅವರ ಪತ್ನಿ ತಪ್ಪು ಮಾಡಿಲ್ಲ. ಕೃಷಿ ಸಚಿವ ಚಲುವರಾಯಸ್ವಾಮಿ ಸಮರ್ಥನೆ.

ಮೈಸೂರಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಹೇಳಿದಿಷ್ಟು..

ಮುಡಾದಲ್ಲಿ ಜಿ ಟಿ ದೇವೇಗೌಡರದ್ದು ಅಕ್ರಮ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ,  ಅಲ್ಲಿ ಜಿ.ಟಿ.ಡಿ ಅವರೊಬ್ಬರದ್ದು ಮಾತ್ರ  ಅಲ್ಲ ಎಲ್ಲರದ್ದೂ ಇದೆ. ನಾನು ಯಾರ ಹೆಸರು ಹೇಳುವುದಿಲ್ಲ. ಅಕ್ರಮ ಆಗಿರುವುದು ವಾಪಸ್ ಕೊಡುತ್ತಾರಾ ? ಎಂದು ಮರು ಪ್ರಶ್ನೆ ಹಾಕಿದ ಸಚಿವರು,   ಸರ್ಕಾರವೇ ಇಂಥ ಅಕ್ರಮ ನಿವೇಶಗಳನ್ನು ವಾಪಸ್ಸು ಪಡೆಯಲಿದೆ.

ಇದರಿಂದ ಬಚಾವ್‌ ಆಗಬೇಕು ಎಂದಾದಲ್ಲಿ ಸಿಎಂ ಪತ್ನಿ ವಾಪಸ್ಸು ಕೊಟ್ಟಂತೆ ಎಲ್ಲರೂ ಸಹ ವಾಪಸ್ಸು ಕೊಡಬೇಕು. ಅಕ್ರಮವಾಗಿ ಕಾನೂನುಬಾಹಿರವಾಗಿ ಪಡೆದವರು ವಾಪಸ್ಸು ನೀಡಲಿ ಎಂದು ಚೆಲುವರಾಯಸ್ವಾಮಿ ಕಿವಿಮಾತು ಹೇಳಿದರು.

ಮುಡಾದಲ್ಲಿ 50:50 ಅನುಪಾತದಲ್ಲಿ ನಿವೇಶನ ಹಚಿರುವುದೇ ಕಾನೂನು ಬಾಹಿರ. 50: 50 ಲೀಗಲ್ ಅಲ್ಲ, ಜತೆಗೆ ಈ ಹೆಸರಿನಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿರುವವರ ಬಗೆಗೂ ಅನುಮಾನ ವ್ಯಕ್ತಪಡಿಸಿದ ಸಚಿವ ಚೆಲುವರಾಯ ಸ್ವಾಮಿ.

key words:  MUDA SCAM, Govt will take back, plots in 50:50 ratio, Agriculture Minister