MUDA ಮತ್ತೊಂದು “ಭೂಚಕ್ರ “:  ಕುಟುಂಬದ ನಾಲ್ವರಿಂದ ನ್ಯಾ.ದೇಸಾಯಿ ಆಯೋಗಕ್ಕೆ ದೂರು ಸಲ್ಲಿಕೆ

MUDA SCAM: Four members of a family file complaint with Justice Desai Commission. The fraud took place in paying compensation for the land acquired by the CITB in Devanur Survey No. 91. Four members of the family have filed a complaint with the Justice P N Desai Commission alleging that MUDA has cheated them by giving their share of compensation to others.

ಮೈಸೂರು, ಏ.೨೫: ಇಲ್ಲಿನ ದೇವನೂರು ಸರ್ವೆ ನಂ.91ರಲ್ಲಿ ಸಿಐಟಿಬಿ ವಶಪಡಿಸಿಕೊಂಡಿದ್ದ ಭೂಮಿಗೆ  ಪರಿಹಾರ ನೀಡುವಲ್ಲಿ ವಂಚನೆ ನಡೆದಿದೆ. ನಮ್ಮ ಪಾಲಿನ ಪರಿಹಾರವನ್ನು ಮುಡಾ  ಬೇರೆಯವರಿಗೆ ನೀಡುವ ಮೂಲಕ ನಮಗೆ ಮೋಸ ಮಾಡಿದೆ ಎಂದು  ಕುಟುಂಬದ ನಾಲ್ವರು ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಗಾಂಧಿನಗರ ನಿವಾಸಿಗಳಾದ ದಿವಂಗತ ಬಿ.ಸಿದ್ದಯ್ಯ ಎಂಬುವರ ವಾರಸುದಾರ ರಾದ ಲೋಕೇಶ್ವರಿ, ಕರುಣಾನಿಧಿ, ಪೊನ್ನಪ್ಪ, ಹೇಮಾವತಿ ಎಂಬುವರು ದೂರು ಸಲ್ಲಿಸಿದ್ದಾರೆ.

ಘಟನೆ ಹಿನ್ನೆಲೆ:

ಚಕ್ರ ಬೋರಯ್ಯ ಅವರಿಗೆ ಸೇರಿದ ದೇವನೂರು ಸರ್ವೆ ನಂ.91ರಲ್ಲಿನ 2 ಎಕರೆ 25 ಗುಂಟೆ ಭೂಮಿಯನ್ನು ಈಸ್ಟ್ ಆಫ್ ಎನ್.ಆರ್. ಮೊಹಲ್ಲಾ ಬಡಾವಣೆ ನಿರ್ಮಾಣಕ್ಕಾಗಿ ಸಿಐಟಿಬಿ (ಇಂದಿನ ಮುಡಾ) 1961ರಲ್ಲಿ ವಶಪಡಿಸಿಕೊಂಡಿತ್ತು.

ಈ ಭೂಮಿಯನ್ನು 1991ರಲ್ಲಿ ಅಂದಿನ ತಹಶೀಲ್ದಾರರು ಚಕ್ರಬೋರಯ್ಯ ಮಕ್ಕಳಾದ ಬಿ.ಸಿದ್ದಯ್ಯ, ಬಿ.ಮಹದೇವು, ಬಿ.ಬಸವ ರಾಜು, ಬಿ.ಸಿದ್ದು ಮತ್ತು ಬಿ.ಗಣೇಶ್ ಅವರಿಗೆ ಜಂಟಿ ಯಾಗಿ ಮರು ಮಂಜೂರಾತಿ ಮಾಡಿ ದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ನಡುವೆ ಬಿ.ಸಿದ್ದಯ್ಯನವರ ವಾರಸುದಾರರಾದ ನಮ್ಮನ್ನು ಹೊರತು ಪಡಿಸಿ ಉಳಿದ ನಾಲ್ವರು ವಾರಸುದಾರ ರಿಂದ ಜಿಪಿಎ ಪಡೆದ ಎಂ.ಬಸವರಾಜು ( ಶ್ರೀರಾಂಪುರ ಎಲ್.ಐ.ಸಿ. ಕಾಲೋನಿಯ ನಿವಾಸಿ,  ಮಹದೇವಪ್ಪ .ಕೆ ಅವರ ಮಗ) ಹಾಗೂ ವಿ.ಸತೀಶ್ (ಎಂ.ವೆಂಕಟಶೆಟ್ಟಿ ಅವರ ಮಗ ಅವರು ನಮ್ಮನ್ನು ಮರೆಮಾಚಿ, ದಿನೇಶ್ ಕುಮಾರ್ ಮುಡಾ ಆಯುಕ್ತರಾಗಿದ್ದ ವೇಳೆ ವಿಜಯನಗರ 1, 3 ಮತ್ತು 4ನೇ ಹಂತಗಳಲ್ಲಿ ಒಟ್ಟು 28,568 ಚದರ ಅಡಿ ಇರುವ 12 ನಿವೇ ಶನಗಳನ್ನು ಪರಿಹಾರವಾಗಿ ಪಡೆದಿದ್ದಾರೆ.

ಬಿ.ಸಿದ್ದಯ್ಯ ವಾರಸುದಾರರಾದ ನಮಗೆ ಸೇರಬೇಕಾದ 21 ಗುಂಟೆ ಭೂಮಿಗೆ ಸಂಬಂಧಿಸಿದ ಪರಿಹಾರ  ನೀಡದೇ ಮೋಸ ಮಾಡಲಾಗಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತಕ್ಕೂ ದೂರು:

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯರೊಬ್ಬರ ಕೈವಾಡ ಇರುವ ಬಗ್ಗೆ ಅನುಮಾನವಿದ್ದು , ಮುಡಾ ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ  ಮೈಸೂರು ಲೋಕಾಯುಕ್ತರಿಗೂ ದೂರು ಸಲ್ಲಿಸಿರುವುದಾಗಿ ಬಿ.ಸಿದ್ದಯ್ಯ ಅವರ ಮೊಮ್ಮಗ ವರುಣ್‌ ತಿಳಿಸಿದರು.

key words: MUDA SCAM, family file complaint. Justice Desai Commission

SUMMARY:

The fraud took place in paying compensation for the land acquired by the CITB in Devanur Survey No. 91. Four members of the family have filed a complaint with the Justice P N Desai Commission alleging that MUDA has cheated them by giving their share of compensation to others.