ಮೈಸೂರು,ಜುಲೈ,5,2024 (www.justkannada.in): ಮುಡಾ ಹಗರಣವನ್ನ ಸಿಬಿಐ ತನಿಖೆಗೆ ಕೊಡಬೇಕು. ಹಾಗೆಯೇ ಸಿಎಂ ಸಿದ್ದರಾಮಯ್ಯ ತಮಗೆ ಬಂದಿರುವ ಜಾಗವನ್ನ ಸರ್ಕಾರಕ್ಕೆ ವಾಪಾಸ್ ಕೊಡಲಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದರು.
ಮುಡಾದ ಬಹುಕೋಟಿ ಹಗರಣ, ಭ್ರಷ್ಟಾಚಾರ ಕುರಿತು ಎಂಎಲ್ ಸಿ ಎಚ್.ವಿಶ್ವನಾಥ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಡವರಿಗೆ ಸೂರು ಒದಗಿಸುವ ಮೂಡಾ ಸಂಸ್ಥೆಯನ್ನ ಮಹಾರಾಜರು ಸ್ಥಾಪಿಸಿದರು. ಆದರೆ ಇಂದು ಅದರ ಪರಿಸ್ಥಿತಿ ಕೆಟ್ಟದಾಗಿದೆ. ಎಲ್ಲಾ ಪಾರ್ಟಿಯವರು ಸೇರಿ ಈ ಪರಿಸ್ಥಿತಿಗೆ ತಂದು ಇಟ್ಟಿದ್ದಾರೆ. ಸಿಎಂ ನನಗೆ 62 ಕೋಟಿ ಬರಬೇಕಾಗಿತ್ತು ಅಂತಾರೆ. ಆರ್ಥಿಕ ಸಚಿವರು ಕೂಡ ಹೌದು. ಲಾಯರ್ ಕೂಡ ಹೌದು. ಸರಕಾರ ಮಾಡಿದ್ದೀರಾ.ಯಾವ ತರ ಲೆಕ್ಕಾಚಾರ ಮಾಡುತ್ತೀರಾ ? ನಾನು ಸಿಎಂ ಒಟ್ಟಿಗೆ ರಾಜಕಾರಣ ಮಾಡಿದವರು. ಸಮಾಜವಾದಿ ಮನಸ್ಸಿನವರು. ಯಾಕೆ ಮಣ್ಣಿಗೋಸ್ಕರ ಆಸೆ ಪಡ್ತಾ ಇದ್ದೀರಾ ? ಕೆಸರೆ ಜಾಗ ದಲಿತನ ಭೂಮಿ. ನಿಂಗ ಉರುಫ್ ಜವರ ಜಮೀನಿನ ಮೂಲ ಮಾಲೀಕ. ನಿಮ್ಮ ಜಾಗಕ್ಕೆ 6 ಕೋಟಿ ರೂ. ಆಗಬಹುದು. ಆದ್ರೆ 62 ಕೋಟಿ ಯಾಕೆ ಕೇಳುತ್ತಿದ್ದೀರಿ. ನಿಮ್ಮ ಘನತೆ ಕುಸಿಯುತ್ತಿದೆ. ಇದು ಸಾವಿರಾರು ಕೋಟಿ ರೂ. ಹಗರಣ ಎಂದು ಸಿದ್ದರಾಮಯ್ಯ ವಿರುದ್ದ ಹೆಚ್. ವಿಶ್ವನಾಥ್ ಕಿಡಿ ಕಾರಿದರು.
ಸಿಎಂ ತಮಗೆ ಬಂದಿರುವ ಜಾಗವನ್ನು ಸರ್ಕಾರಕ್ಕೆ ವಾಪಾಸ್ ಕೊಡಲಿ. ಅದೇ ಜಾಗದಲ್ಲಿ ಒಂದು ಆಸ್ಪತ್ರೆ ಕಟ್ಟಿಸಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತೆ. ಇಲ್ಲದೆ ಇದ್ದರೆ ನಿಮ್ಮ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ. ಯಾಕೆ ಮಾನ ಮರ್ಯಾದೆ ಬೀದಿ ಬೀದಿಯಲ್ಲಿ ಕಳೆದು ಕೊಳ್ತಾ ಇದ್ದೀರಾ ? ಈ ಹಗರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಅಂತ ನಿಮ್ಮ ಶಿಷ್ಯರು ಸಲಹೆ ಕೊಡ್ತಾ ಇದ್ದಾರೆ. ನ್ಯಾಯಾಂಗ ತನಿಖೆಯಿಂದ ಯಾವ ಪ್ರಯೋಜನವಿಲ್ಲ. ಈ ಹಗರಣ ಸಿಬಿಐಗೆ ಕೊಡಿ. ಸಾವಿರಾರು ಕೋಟಿ ರೂ ಹಗರಣ ಇದು ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದರು.
ಏಯ್ ಭೈರತಿ ಸುರೇಶ್ ನಿಂಗೇನ್ ಬುದ್ದಿ ಇದಿಯಪ್ಪ?
ಇದೇ ವೇಳೆ ಸಚಿವ ಭೈರತಿ ಸುರೇಶ್ ವಿರುದ್ದವೂ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಏಯ್ ಭೈರತಿ ಸುರೇಶ್ ನಿಂಗೇನ್ ಬುದ್ದಿ ಇದಿಯಪ್ಪ ? ಹೆಲಿಕಾಪ್ಟರ್ ನಲ್ಲಿ ಬಂದು ಪೊಲೀಸ್ ಭದ್ರತೆಯಲ್ಲಿ ಸಭೆಯ ಮಾಡಿ ಹೋಗ್ತಾನೆ. ಹೇ ನೀನು ಯಾವನ್ಲೇ.? ನೀನು ದಡ್ಡನೋ ಬುದ್ದಿವಂತನಾ? ನಾನು ಏಳು ಸೈಟ್ ಕೇಳಿದ್ದೇನೆ ಅಂತೀಯಲ್ಲ. ಇವನೂ ಯಾವನೂ ರೀ ಭೈರತಿ. ನಾನು ಪ್ರಾಮಾಣಿಕ ಅಂತಾ ವಿಧಾನಸೌಧದ ಒಳಗೆ ಹೇಳಿದ್ದಿನಿ. ಚೇಂಜ್ ಆಫ್ ಲ್ಯಾಂಡ್ ಗೆ ಐದು ಲಕ್ಷ ಫಿಕ್ಸ್ ಮಾಡಿದ್ದಾನೆ ಭೈರತಿ ಸುರೇಶ್ ಎಂದು ಏಕವಚನದಲ್ಲೇ ಹರಿಹಾಯ್ದರು.
Key words: Muda, scam, CM, government, H. Vishwanath