ಮುಡಾ ಹಗರಣ: ರಾಷ್ಟ್ರಮಟ್ಟದಲ್ಲಿ ಹೋರಾಟದ ಬಗ್ಗೆ ಚರ್ಚಿಸಿ ತೀರ್ಮಾನ-ಬಿವೈ ವಿಜಯೇಂದ್ರ

ನವದೆಹಲಿ,ಆಗಸ್ಟ್,27,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಲು ಕೆಲವರು ಸಲಹೆ ನೀಡಿದ್ದಾರೆ.  ರಾಜ್ಯನಾಯಕರೊಂದಿಗೆ ಈ ಬಗ್ಗೆ  ಚರ್ಚೆ ಮಾಡಿ ತೀರ್ಮಾನಿಸಲಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಶಾಸಕ ಯತ್ನಾಳ್ ವಿರುದ್ದ ದೂರು ಕೊಡುವುದಕ್ಕೆ ದೆಹಲಿಗೆ ಬಂದಿಲ್ಲ. ರಾಷ್ಟ್ರೀಯ ಅಧ್ಯಕ್ಷರ ಜೊತೆ ಸಂಘಟನೆ ಬಗ್ಗೆ ಚರ್ಚೆಗೆ ಬಂದಿದ್ದೇನೆ. ಯಾರೇ ಪಾದಯಾತ್ರೆ ಮಾಡಿದರೂ ಪಕ್ಷದ ಬೆಳವಣಿಗೆಗೆ ಪೂರಕವಾಗಿರಲಿ.  ಪಾದಯಾತ್ರೆಗೆ ಹೈಕಮಾಂಡ್ ಒಪ್ಪಿಗೆ ನೀಡಿದರೇ ಪಾದಯಾತ್ರೆ ಮಾಡಲಿ ಎಂದು ತಿಳಿಸಿದರು.

ಸಿದ್ಧರಾಮಯ್ಯ ಸರ್ಕಾರ ಹಗರಣದಲ್ಲಿ ಮುಳುಗಿದೆ. ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ.  ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದವಾಗಿ ಹೋರಾಟ ಮಾಡಿದ್ದೇವೆ. ಈ ಪರಿಣಾಮ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ   ವಾಲ್ಮೀಕಿ ಹಗರಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ ನಾಗೇಂದ್ರ, ದ್ದದ್ದಲ್ ಗೆ  ಎಸ್ ಐಟಿ ಕ್ಲೀನ್ ಚಿಟ್ ನೀಡಿದೆ. ಎಸ್ ಐಟಿ ತಪ್ಪಿತಸ್ಥರು ಎಂದು ವರದಿ ಕೊಟ್ಟಿದ್ದರೇ ಸಿಎಂ ಬುಡಕ್ಕೆ ಬರುತ್ತಿತ್ತು ಎಂದು ಬಿವೈ ವಿಜಯೇಂದ್ರ ಹೇಳಿದರು.

Key words: Muda scam,  Discuss, fight, national level, BY Vijayendra