100 ಕೋಟಿ ಅವ್ಯಹಾರವೆಸಗಿದ್ದಾರೆಂದು ಆರೋಪಿಸಿ ವರದಿ: ಖಾಸಗಿ ವಾಹಿನಿ ವಿರುದ್ದ ಮೊಕ್ಕದ್ದಮೆ ದಾಖಲಿಸಿದ ಮರಿತಿಬ್ಬೇಗೌಡ

ಮೈಸೂರು,ಸೆಪ್ಟಂಬರ್ ,12,2024 (www.justkannada.in): 5 ಸಾವಿರ ಕೋಟಿ ಮುಡಾ ಹಗರಣದ ಸಂಬಂಧ ಮಾಜಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ 100 ಕೋಟಿ ರೂ ಅವ್ಯವಹಾರವೆಸಗಿ 58 ಮುಡಾ ನಿವೇಶನಗಳನ್ನ ಪಡೆದಿದ್ದಾರೆಂದು ಪ್ರಸಾರ ಮಾಡಿದ್ದ ಖಾಸಗಿ ಸುದ್ದಿವಾಹಿನಿ( ಇಂಡಿಯನ್ ಟಿವಿ) ವಿರುದ್ದ ಖಾಸಗಿ ಮೊಕದ್ದಮೆ ದಾಖಲಿಸಿದ್ದಾರೆ.

ಮೈಸೂರಿನ 3ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾಜಿ ಎಂಎಲ್ ಸಿ ಮರಿತಿಬ್ಬೇಗೌಡ ಖಾಸಗಿ ಮೊಕದ್ದೊಮ್ಮೆ ದಾಖಲಿಸಿದ್ದು ವಿಚಾರಣೆಯನ್ನ ಕೋರ್ಟ್ 19-9-2024ಕ್ಕೆ ನಿಗದಿ ಮಾಡಿದೆ.

5 ಸಾವಿರ ಕೋಟಿ ಮುಡಾ ಹಗರಣದ ಸಂಬಂಧ ಇಂಡಿಯನ್ ಟಿವಿ  ಮುಖ್ಯಸ್ಥ ವೆಂಕಟೇಶ್ ಮ್ಯಾನೇಜಿಂಗ್ ಪಾರ್ಟರ್ ಬಸವರಾಜ್  ತಮ್ಮ ಖಾಸಗಿ ಟಿವಿಯಲ್ಲಿ  ಮಾಜಿ ಎಂಎಲ್ ಸಿ  ಮರಿತಿಬ್ಬೇಗೌಡ 100 ಕೋಟಿ ಅವ್ಯವಹಾರ ವೆಸಗಿದ್ದು 58 ಮುಡಾ ನಿವೇಶನಗಳನ್ನ ಪಡೆದಿರುತ್ತಾರೆಂದು ಗಂಭೀರ ಆರೋಪದ ವರದಿ ಮಾಡಿದ್ದರು.

ಈ ಸಂಬಂಧವಾಗಿ  ಮರಿತಿಬ್ಬೇಗೌಡ ಅವರು, ನನ್ನ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ನೀವು ಪ್ರಸಾರ ಮಾಡಿದ್ದು ಸುಳ್ಳು ಸುದ್ದಿ. ಕ್ಷಮೆಯಾಚಿಸಬೇಕೆಂದು ವಕೀಲ ಹೆಚ್ ಲೋಕೇಶ್ ಮುಖಾಂತರ ನೋಟಿಸ್ ನೀಡಿದ್ದರು. ಆದರೆ ನೋಟಿಸ್ ಗೆ ಉತ್ತರ ಬರಲಿಲ್ಲ

ಈ ಹಿನ್ನೆಲೆಯಲ್ಲಿ ಮರಿತಿಬ್ಬೇಗೌಡ ಖಾಸಗಿ ಮೊಕದ್ದೊಮ್ಮೆ ದಾಖಲಿಸಿದ್ದು, 3ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರಘು ಅವರು ಸೆ.19ಕ್ಕೆ ವಿಚಾರಣೆ ಮುಂದೂಡಿದರು.

Key words: muda scam,, Former MLC, MarithibbeGowda,case, against, Indian tv