ಮುಡಾದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ನಿವೇಶನಗಳು ಅಕ್ರಮವಾಗಿ ದರೋಡೆ- ರಘು ಕೌಟಿಲ್ಯ ಆರೋಪ

ಮೈಸೂರು,ಆಗಸ್ಟ್, 23,2024 (www.justkannada.in): ಮುಡಾದಲ್ಲಿ ಐದು ಸಾವಿರ ಅಷ್ಟೇ ಅಲ್ಲ ಹತ್ತು ಸಾವಿರಕ್ಕೂ ಹೆಚ್ಚು ನಿವೇಶನಗಳು ಅಕ್ರಮವಾಗಿ ದರೋಡೆಯಾಗಿದೆ ಎಂದು ಬಿಜೆಪಿ ಮುಖಂಡ  ರಘು ಕೌಟಿಲ್ಯ ಆರೋಪ ಮಾಡಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ಕೌಟಿಲ್ಯ,  ಮುಡಾ ಹಗರಣ ರಾಜಕೀಯದ ವಿಷಯ ವಸ್ತು ಆಗಬಾರದು. ಮುಡಾದಲ್ಲಿ ಐದು ಸಾವಿರ ನಿವೇಶನ ಅಕ್ರಮವಾಗಿದೆ ಎಂಬ ಆರೋಪ ಬಂದಿದೆ. ಐದು ಸಾವಿರ ಅಷ್ಟೇ ಅಲ್ಲ ಹತ್ತು ಸಾವಿರಕ್ಕೂ ಹೆಚ್ಚು ನಿವೇಶನಗಳು ಅಕ್ರಮವಾಗಿ ದರೋಡೆಯಾಗಿದೆ. ಇಂತಹ ದೊಡ್ಡ ಹಗರಣ ಮೈಸೂರಿನ ಇತಿಹಾಸದಲ್ಲೇ ಆಗಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಇಲ್ಲಿಯವರೆಗೆ ಯಾವುದೇ ನಿವೇಶನ ಹಂಚಿಕೆ ಮಾಡಲಾಗಿಲ್ಲ. ಆದರೆ ಇಲ್ಲಿ ಪ್ರಭಾವಿಗಳು, ರಾಜಕಾರಣಿಗಳು, ರಿಯಲ್ ರಿಯಲ್ ಎಸ್ಟೇಟ್ ಉದ್ಯಮಿಗಳು ಅಕ್ರಮವಾಗಿ ನಿವೇಶನ ಪಡೆದಿದ್ದಾರೆ. ತವರು ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಹೊರ ತೆಗೆಯಲಿಕ್ಕೆ ಸಿದ್ದರಾಮಯ್ಯ ಯಾಕೆ ಮನಸ್ಸು ಮಾಡಲಿಲ್ಲ ಅನಿಸುತ್ತದೆ. ಇಲ್ಲಿ ಆ ಪಕ್ಷ ಈ ಪಕ್ಷ ಅಂತೇನಿಲ್ಲ ಎಲ್ಲರೂ ದರೋಡೆಕೊರರೇ. ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಅಧಿಕಾರಿಗಳಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.

50:50ಅನುಪಾತದಲ್ಲಿ ಇಲ್ಲಿಯವರೆಗೂ ಹಂಚಿಕೆ ಮಾಡಲಾಗಿರುವ ಎಲ್ಲಾ ನಿವೇಶನಗಳು ಅಕ್ರಮ ಎಂದು ಸರ್ಕಾರದ ಟೇಕ್ನಿಕಲ್ ಟೀಮ್ ಹೇಳುತ್ತಿದೆ. ಸಿದ್ದರಾಮಯ್ಯನವರು ಈಗಲಾದರೂ ತಮಗೆ ನೀಡಿರುವ 14 ಸೈಟ್ ಗಳನ್ನ ವಾಪಾಸ್ ನೀಡಲಿ. ನ್ಯಾಯಯುತವಾಗಿ ತನಿಖೆ ಮುಗಿದ ಬಳಿಕ ಬೇಕಿದ್ದರೆ ಪಡೆಯಿರಿ ಎಂದು ರಘು ಕೌಟಿಲ್ಯಾ ಹೇಳಿದರು.

ಮುಡಾ ಅಕ್ರಮದಲ್ಲಿ ಸಚಿವ ಭೈರತಿ ಸುರೇಶ್ ಕಿಂಗ್ ಪಿನ್.

ಮುಡಾ ಅಕ್ರಮದಲ್ಲಿ ಸಚಿವ ಭೈರತಿ ಸುರೇಶ್ ಕಿಂಗ್ ಪಿನ್. ಭೈರತಿ ಸುರೇಶ್ ಮುಡಾದಲ್ಲಿ ಸಭೆ ನಡೆಸಿ 50:50ನಿವೇಶನ ಹಂಚಿಕೆ ವಾಪಾಸ್ ಪಡೆಯುತ್ತೇನೆ ಎಂದರು. ಆದರೆ ಇದುವರೆಗೂ ಯಾವುದೇ ನಿವೇಶನ ವಾಪಸ್ ಪಡೆಯಲಿಲ್ಲ. ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಭೈರತಿ ಸುರೇಶ್ ಅಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಿಎಂ ಇದನ್ನ ತನಿಖೆಗೆ ನೀಡುತ್ತಿಲ್ಲ. ಕೇವಲ 14ಸೈಟ್ ಗಳ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಇದರಿಂದ ಆಚೆ ಅಕ್ರಮವಾಗಿರುವ 14 ಸಾವಿರ ಸೈಟ್ ಗಳ ಬಗ್ಗೆ ಯಾರು ಚರ್ಚೆ ಮಾಡುತ್ತಿಲ್ಲ ಎಂದು  ರಘು ಕೌಟಿಲ್ಯಾ ಹೇಳಿದರು.

Key words Muda scam, ten thousand, site, looted, Raghu Kautilya