ಬೆಂಗಳೂರು,ಆಗಸ್ಟ್,13,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ದಾಖಲಾಗಿರುವ ಖಾಸಗಿ ದೂರಿನ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸದಂತೆ ಕೋರಿ ಆಲಂ ಪಾಷಾ ಎಂಬುವವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಜಾಗೊಳಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಆಲಂ ಪಾಷಾ ಪ್ರಾಸಿಕ್ಯೂಷನ್ ಅನುಮತಿ ಇಲ್ಲದೆ ಸಿಎಂ ವಿರುದ್ಧ ಕೇಸ್ ಸ್ವೀಕರಿಸಬಾರದು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಪ್ರಾಸಿಕ್ಯೂಸನ್ ಗೆ ಅನುಮತಿ ಇಲ್ಲದೇ ವಿಚಾರಣೆ ನಡೆಸದಂತೆ ಕೋರಿ ಆಲಂ ಪಾಷಾ ಸಲ್ಲಿಸಿದ್ದ ಮಧ್ಯಮತರ ಅರ್ಜಿಯನ್ನ ಕೋರ್ಟ್ ವಜಾಗೊಳಿಸಿದೆ.
ಆಲಂ ಪಾಷಾ ವಾದಕ್ಕೆ ಜಡ್ಜ್ ಸಂತೋಷ ಗಜಾನನ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಅರ್ಜಿದಾರ ಆಲಂಪಾಷ ದೂರು ದಾಖಲಿಸಲು ಅನುಮತಿ ಕೇಳುತ್ತಿಲ್ಲ. ಬದಲಿಗೆ ಕಾನೂನಿನ ಪ್ರಕ್ರಿಯೆ ತಡೆಹಿಡಿಯಲು ಕೋರುತ್ತಿದ್ದಾರೆ ಹೀಗಾಗಿ ಆಲಂಪಾಷ ಅರ್ಜಿ ವಜಾ ಗೊಳಿಸಲು ಅರ್ಹ ಎಂದು ಕೋರ್ಟ್ ಆದೇಶಿಸಿತು.
ಅಲ್ಲದೆ ಅರ್ಜಿದಾರ ಆಲಂ ಪಾಷಾ ವಿರುದ್ದ ಗರಂ ಆದ ನ್ಯಾಯಮೂರ್ತಿಗಳು ಯಾವ ಕಾನೂನಿನಡಿ ನೀವು ಅರ್ಜಿ ಸಲ್ಲಿಸಿದ್ದೀರಿ? ಎಂದು ಪ್ರಶ್ನಿಸಿದರು. ಈ ವೇಳೆ ಸಾರ್ವಜನಿಕರ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿರುವುದಾಗಿ ಆಲಂಪಾಷಾ ವಾದಿಸಿದರು. ಪಾಷಾ ವಾದಕ್ಕೆ ಸ್ನೇಹಮಯಿ ಕೃಷ್ಣ ಪರ ಲಕ್ಷ್ಮಿ ಅಯ್ಯಂಗರ್ ಆಕ್ಷೇಪ ವ್ಯಕ್ತಪಡಿಸಿ, ಈ ಹಂತದಲ್ಲಿ ಸಂಬಂಧವಿಲ್ಲದ ವ್ಯಕ್ತಿ ವಾದ ಆಲಿಸಬಾರದು ಕೋರ್ಟ್ ಸಮಯ ವ್ಯರ್ಥ ಮಾಡಿಸಿದ್ದಕ್ಕೆ ದಂಡ ವಿಧಿಸಬೇಕು ಎಂದು ವಾದಿಸಿದರು.
Key words: Muda scandal, Court, dismisses, interim petition, Alam pasha