ಕೊಡಗು,ಮಾರ್ಚ್,28,2025 (www.justkannada.in): ಕಾಫಿ ತೋಟದ ಮನೆಯಲ್ಲಿ ದುಷ್ಕರ್ಮಿಯೊಬ್ಬ ಒಂದೇ ಕುಟುಂಬದ ನಾಲ್ವರನ್ನು ಬರ್ಬರ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕೊಳತೋಡಿನಲ್ಲಿ ನಡೆದಿದೆ.
ಕರಿಯ (75), ಗೌರಿ (70), ನಾಗಿ (35), ಕಾವೇರಿ (7) ಹತ್ಯೆಯಾದವರು. ಆರೋಪಿ ಗಿರೀಶ್ (35) ಎಂಬಾತನೇ ನಾಲ್ವರನ್ನೂ ಕತ್ತಿಯಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ.
ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಕುಟುಂಬ ಕಾಫಿ ತೋಟ ಲೈನ್ ಮನೆಯಲ್ಲಿ ವಾಸವಿತ್ತು. ಇನ್ನು, ಆರೋಪಿ ಗಿರೀಶ್ ಈ ಕುಟುಂಬದ ಅಳಿಯನಾಗಿದ್ದಾನೆ ಎನ್ನಲಾಗಿದೆ.
ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Kodagu, killing, four members, same family