ಮೆಡಿಕಲ್ ಟೆಸ್ಟ್ ಮುಕ್ತಾಯ: ನಟ ದರ್ಶನ್ ಸೇರಿ 13 ಆರೋಪಿಗಳು ಕೋರ್ಟ್ ಗೆ ಹಾಜರು.

ಬೆಂಗಳೂರು,ಜೂನ್,11,2024 (www.justkannada.in): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 13 ಆರೋಪಿಗಳನ್ನ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಪ್ರಕರಣ ಸಂಬಂಧ ಪವಿತ್ರಗೌಡ ಮೊದಲೇ ಆರೋಪಿಯಾಗಿದ್ದು ನಟ ದರ್ಶನ್ 2ನೇ ಆರೋಪಿಯಾಗಿದ್ದಾರೆ. 13 ಆರೋಪಿಗಳಿಗೂ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿದ್ದು ಇದೀಗ ಆರೋಪಿಗಳನ್ನ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲವೇ ನಿಮಿಷಗಳಲ್ಲಿ ನಟ ದರ್ಶನ್ ಗೆ ಪೊಲೀಸ್ ಕಸ್ಟಡಿಯೋ ಅಥವಾ ನ್ಯಾಯಾಂಗ ಬಂಧನವೋ ತಿಳಿದು ಬರಲಿದೆ.

Key words: murder case, actor, Darshan, accused, court