ಬೆಂಗಳೂರು,ಜುಲೈ,24,2023(www.justkannada.in): ರಾಜ್ಯ ಹೈಕೋರ್ಟ್ನ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನ್ಯಾಯಮೂರ್ತಿಗಳಿಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಸಂದೇಶ ರವಾನಿಸಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ . ಇದನ್ನು ದುಬೈ ಗ್ಯಾಂಗ್ನಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹೈಕೋರ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಮುರಳೀಧರ್ಗೆ ಸಂದೇಶ ಬಂದಿದೆ.
50 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದ್ದು, ಅಲೈಡ್ ಬ್ಯಾಂಕ್ ಲಿಮಿಟೆಡ್ನ ಖಾತೆಯ ಸಂಖ್ಯೆಯನ್ನು ದುಷ್ಕರ್ಮಿಗಳು ನೀಡಿದ್ದಾರೆ. ಬೆದರಿಕೆ ಸಂಬಂಧ ಸೆಂಟ್ರಲ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಾಟ್ಸಪ್ ಸಂದೇಶದ ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.
Key words: murder- threat – 6 judges –karnataka- High Court.