ಹೆಂಡತಿ ಬಿಟ್ಟು ಬಾಡಿಗೆ ಮನೆ ಮಾಲೀಕನ ಪತ್ನಿ ಮದುವೆಯಾಗಿದ್ದ ವ್ಯಕ್ತಿಯ ಕಿಡ್ನಾಪ್, ಹತ್ಯೆ

ಬೆಂಗಳೂರು,ಏಪ್ರಿಲ್,28,2025 (www.justkannada.in): ತನ್ನ ಹೆಂಡತಿಯನ್ನ ಬಿಟ್ಟು ಬಾಡಿಗೆ ಮನೆಯ ಮಾಲೀಕನ ಪತ್ನಿಯನ್ನ ಮದುವೆಯಾಗಿದ್ದ ವ್ಯಕ್ತಿಯನ್ನ ನಾಲ್ಕೈದು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೋಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಿಲೀಪ್ ಹತ್ಯೆಯಾದ ವ್ಯಕ್ತಿ. ದಿಲೀಪ್  ಬೆಂಗಳೂರಿನ ದಾಬಸ್ ಪೇಟೆಯಲ್ಲಿ ಕಾರ್ಗೋ ನಡೆಸುತ್ತಿದ್ದನು. ಈ ಮಧ್ಯೆ ದಿಲೀಪ್  ಹೆಂಡತಿಯನ್ನ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸವಿದ್ದ. ಸೋಲೂರಿನ ಬಾಡಿಗೆಮನೆಯಲ್ಲಿ ವಾಸವಿದ್ದ ದಿಲೀಪ್  ಮನೆ ಮಾಲೀಕನ ಪತ್ನಿ ಅಮೃತ ಎಂಬುವವರನ್ನ ಪರಿಚಯ ಮಾಡಿಕೊಂಡಿದ್ದ. ಈ ಮಧ್ಯೆ 5 ವರ್ಷಗಳ ಹಿಂದೆ ಗಂಡನನ್ನ ಬಿಟ್ಟು  ಅಮೃತ ದೀಲಿಪ್ ಮದುವೆಯಾಗಿದ್ದು , ಒಟ್ಟಾಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.  ಇದು ಅಮೃತಾ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಮಧ್ಯೆ  ನಿನ್ನೆ ನೆಲಮಂಗಲದಲ್ಲಿ ಅಮೃತಾ ಮತ್ತು ದಿಲೀಪ್ ಸ್ನ್ಯಾಕ್ಸ್ ತಿನ್ನಲು ಬಂದಿದ್ದರು. ಈ ವೇಳೆ  ಐದಾರು ಜನರ ಗುಂಪು ದಿಲೀಪ್ ಮೇಲೆ ಮಚ್ಚನಿಂದ ಹಲ್ಲೆ ಮಾಡಿ ನಂತರ ಕಿಡ್ನಾಪ್ ಮಾಡಿದ್ದರು. ಇದೀಗ ತುಮಕೂರಿನಲ್ಲಿ ದಿಲೀಪ್   ಶವ ಪತ್ತೆಯಾಗಿದ್ದು, ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Man, kidnapped, murdered, Bangalore