ಬೆಂಗಳೂರು:ಆ-6: ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ಮೂಲದ ಬ್ಯಾಂಡ್ ಕನ್ನಡ ಹಾಡುಗಳನ್ನು ನುಡಿಸಿಲ್ಲ ಎಂಬ ಕಾರಣಕ್ಕೆ ಮ್ಯೂಜಿಶಿಯನ್ ಗಳ ಮೇಲೆ ಹಲ್ಲೆ ನಡೆಸರುವ ಘಟನೆ ವೈಟ್ ಫೀಲ್ಡ್ ನಲ್ಲಿ ನಡೆದಿದೆ.
ವೈಟ್ಫೀಲ್ಡ್ನ ಫಿಯೋನಿಕ್ಸ್ ಮಾರ್ಕೆಟ್ಸಿಟಿ ಮಾಲ್ನಲ್ಲಿ ಶುಕ್ರವಾರ ಬೆಂಗಳೂರು ಮೂಲದ ಬ್ಯಾಂಡ್ ಮ್ಯೂಸಿಕೇಶನ್ ಪ್ರದರ್ಶನ ನೀಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪ್ರದರ್ಶನವು ಅಧಿಕೃತವಾಗಿ ಮುಗಿದ ನಂತರ ಮತ್ತು ಬ್ಯಾಂಡ್ ಸದಸ್ಯರು ತಮ್ಮ ವಾದ್ಯವನ್ನು ಪ್ಯಾಕ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ.
ಮಧ್ಯಪಾನ ಮಾಡಿದ್ದ ಇಬ್ಬರು ಬ್ಯಾಂಡ್ ಸದಸ್ಯರ ಬಳಿ ಬಂದು ಕನ್ನಡ ಹಾಡು ಹಾಡುವಂತೆ ಹೇಳಿದ್ದಾರೆ. ಇದಕ್ಕೆ ಬ್ಯಾಂಡ್ ಸದಸ್ಯರು ಒಪ್ಪಿ ಕನ್ನಡ ಹಾಡೊಂದನ್ನು ಹಾಡಿದ್ದಾರೆ. ಆದರೆ ಯಾವುದೇ ಮ್ಯೂಸಿಕ್ ಇನ್ಸ್ಟ್ರೂಮೆಂಟ್ ಗಳಿರಲಿಲ್ಲ. ಕಾರಣ ಅಷ್ಟರಲ್ಲಾಗಲೇ ಮಾಲ್ ನವರು ಬ್ಯಾಂಡ್ ಗಳ ಸ್ವಿಚ್ ಆಫ್ ಮಾಡಿಬಿಟ್ಟಿದ್ದರಿಂದ ವಾದ್ಯಗಳನ್ನು ಪ್ಯಾಕ್ ಮಾಡಲಾಗಿತ್ತು. ಅಷ್ಟಕ್ಕೇ ಸುಮ್ಮನಾಗದ ಅವರು, ಹಲವು ಹಾಡುಗಳನ್ನು ಮ್ಯೂಜಿಕ್ ಇನ್ ಸ್ಟ್ರೂಮೆಂಟ್ ಗಳ ಜತೆಗೇ ಹಾಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ತಂಡದ ಸದಸ್ಯರಲ್ಲೊಬ್ಬರಾದ ಸೋಮನಾಥ್, “ನಾವು ನಮ್ಮ ಸೆಟ್ ಅನ್ನು ಮುಗಿಸಿದ ನಂತರ, ಇಬ್ಬರು ಕುಡುಕರು ಬಂದು ಹೆಚ್ಚಿನ ಕನ್ನಡ ಹಾಡುಗಳನ್ನು ನುಡಿಸಲು ಹೇಳಿದರು. ನಾವು ಕೆಲವನ್ನು ಆಡಿದ್ದೇವೆ ಎಂದು ನಾವು ಅವರಿಗೆ ಹೇಳಿದೆವು ಆದರೆ ನಾವು ಇನ್ನಷ್ಟು ಹಾಡನ್ನು ಹಾಡಬೇಕೆಂದು ಒತ್ತಾಯಿಸಿದರು. ಅವರ ಕೋರಿಕೆಯನ್ನು ಈಡೇರಿಸಲು ನಾವು ಕನ್ನಡ ಹಾಡನ್ನು ಮತ್ತೆ ಹಾಡಿದೆವು. ಆದರೆ ನಮ್ಮ ಎಲ್ಲಾ ಮ್ಯೂಜಿಕ್ ಸಾಧನಗಳನ್ನು ಮಾಲ್ ಸಿಬ್ಬಂದಿ ಧ್ವನಿ ವ್ಯವಸ್ಥೆಯಿಂದ ಸಂಪರ್ಕ ಕಡಿತಗೊಳಿಸಿದ್ದರು. ಆದರೆ ನಾವು ಧ್ವನಿ ಸೆಟಪ್ನೊಂದಿಗೆ ಹಾಡಬೇಕು ಎಂದು ಕಿಡಿಗೇಡಿಗಳು ಒತ್ತಾಯಿಸಿದರು, ಆದ್ದರಿಂದ ನಾವು ಅವರನ್ನು ಮಾಲ್ ಸಿಬ್ಬಂದಿಯನ್ನು ಸಂಪರ್ಕಿಸಲು ಹೇಳಿದೆವು. ಅದಕ್ಕೆ ಮಾಲ್ ಸಿಬ್ಬಂದಿಗಳು ನಿರಾಕರಿಸಿದ್ದಾರೆ.
ಕಿಡಿಗೇಡಿಗಳು ಮೈಕ್ ಸ್ಟ್ಯಾಂಡ್ ನಿಂದ ನಮ್ಮನ್ನು ಹೊಡೆದಿದ್ದಾರೆ. ಮೊದಲು ಬೇಸ್ ಗಿಟಾರ್ ವಾದಕ ರುದ್ರ ಎಂಬಾತನನ್ನು ಹೊಡೆಯಲು ಹೋದರು ಆದರೆ ನಾವೆಲ್ಲ ಸೇರಿ ತಪ್ಪಿಸಿದೆವು. ಗಲಾಟೆಯಾಗುತ್ತಿದ್ದಂತೆ ಅನುಭವ್ ಎಂಬ ಇನ್ನೊಬ್ಬ ಬ್ಯಾಂಡ್ ಸದಸ್ಯ ಪೊಲೀಸರಿಗೆ ಕರೆ ಮಾಡಲು ಫೋನ್ ಎತ್ತಿಕೊಂಡಿದ್ದ ಈ ವೇಳೆ ಆತನನ್ನು ಹೊಡೆದು ಆತನ ಕೈಲಿದ್ದ ಮೊಬೈಲ್ ಕಿತ್ತಿಕೊಂಡು ಪುಡಿ ಪುಡಿ ಮಾಡಿದ್ದಾರೆ. ಗಲಾಟೆ ಹೆಚ್ಚುತ್ತಿದ್ದಂತೆ ಮಾಲ್ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ದಾಳಿಕೋರರನ್ನು ಎಳೆದು ಹೊರಹಾಕಿದದರೆ.
ಮಾಲ್ ನ ಸಿಸಿಟಿವಿ ಪುಟೇಜ್ ಸಮೇತ ಮಹದೇವಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.