ಸಂಗೀತ ನಮ್ಮನ್ನು ಬಲವಾಗಿ ಅಂಟಿಕೊಳ್ಳುವಂತಹ ಕಲಾಪ್ರಕಾರ. ಇದಕ್ಕೊಂದು ಜೀವಂತ ಉದಾಹರ ಣೆಯೆಂದರೆ ಸಂಗೀತಗಾರ ಪ್ರವೀಣ್ ಡಿ. ರಾವ್ ಅವರ ಪ್ರಯತ್ನದ ಫಲವಾದ #someyochane ಎಂಬ ಜಾಲತಾಣ. ಅವರ ಫೇಸ್ಬುಕ್ನಲ್ಲಿ ಪ್ರಾರಂಭಿಸಿದ ಈ ಪ್ರಯತ್ನದಿಂದಾಗಿ ಬಹಳ ಜನ ಪ್ರತಿಭಾನ್ವಿತ ಹಾಡುಗಾರರು, ಸಂಗೀತ ಸಂಯೋಜಕರು ಮತ್ತು ಕವಿಗಳು ಒಂದೇ ವೇದಿಕೆಯಲ್ಲಿ ಮಧುರವಾದ ಗೀತೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಿದೆ.
ಇಂತಹ ಒಂದು ಸಂಯೋಜಿತ ಪ್ರಯತ್ನದಲ್ಲಿ ಮೈಸೂರಿನ ದೀಪು ನಾಯರ್, ಬೆಂಗಳೂರಿನ ಎಸ್.ಆರ್.ರಾಮಕೃಷ್ಣ ಮತ್ತು ಮಂಗಳೂರಿನ ಶಶಿರಾಜ್ ಕಾವೂರ್ ಒಟ್ಟು ಸೇರಿದ್ದಾರೆ. ಈ ಜಾಲತಾಣದ ಮೂಲಕ ಒಂದು ಗೀತೆಯನ್ನು ಸಂಯೋಜಿಸಿ ಪ್ರಸ್ತುತಪಡಿಸುವ ಸಲುವಾಗಿ
ಅವರೆಲ್ಲಾ ಒಟ್ಟು ಸೇರುವಂತೆ ಮಾಡಿದ್ದಾರೆ. ಇದರ ಫಲವೇ ಮುಂಜಾನೆ ಮಸುಕಿನಲಿ ಎಂಬ ಮಧುರಗೀತೆಯ ಸಂಗೀತ ಸಂಯೋಜನೆ. ಪ್ರಸ್ತುತ ಜಾರಿಯಲ್ಲಿರುವ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಇವರೆಲ್ಲರನ್ನೂ ಫೇಸ್ಬುಕ್ ವೇದಿಕೆಯಾದ ಸಂಯೋಚನೆ (#someyochane) ಮೂಲಕ ಒಟ್ಟುಗೂಡಿಸಿದವರು ಪ್ರವೀಣ್ ರಾವ್ ತಂಡದಲ್ಲಿರುವ ಸುಪ್ರಿಯಾ ರಘು ನಂದನ್ ಎಂಬ ಗಾಯಕಿ.
ತಮ್ಮ ತಮ್ಮ ಕ್ಷೇತ್ರದಲ್ಲಿ ಬಹಳ ಪ್ರತಿಭಾವಂತರಾದ ಇವರೆಲ್ಲರೂ ಈ ಜಾಲತಾಣದ ಮೂಲಕ ಸೇರಿ ಒಂದು ತಂಡವಾಗಿ ಕೆಲಸ ಮಾಡಲು ಸಾಧ್ಯವಾಯಿತು. ಇಂತಹ ಸೃಜನಶೀಲ ಮನಸ್ಸುಗಳು ಒಂದುಗೂಡಿದರೆ ಅದರ ಫಲವೂ ಬಹಳ ಉತ್ತಮವಾಗಿರಲೇ ಬೇಕು. ಹೀಗೆ , ಮುಂಜಾನೆ ಮುಸುಕಿನಲಿ ಎಂಬ ಗೀತೆಯನ್ನು ದೀಪು ನಾಯರ್ ಮನಸ್ಸಿಗೆ ಮುದನೀಡುವಂತೆ ಮೆಲುದನಿಯಲ್ಲಿ ಹಾಡಿದ್ದಾರೆ.
ಶಶಿರಾಜ್ ಕಾವೂರ್ ಮಂಗಳೂರಿನಲ್ಲಿ ನೆಲೆಸಿರುವ ಒಬ್ಬ ಕವಿ , ನಟ , ನಾಟಕಕಾರ, ಚಿತ್ರಕಥೆ-ಸಂಭಾಷಣೆ ಬರಹಗಾರ ಮತ್ತು ವೃತ್ತಿಯಲ್ಲಿ ವಕೀಲ. ಅವರು ಬಣ್ಣ ಬಣ್ಣದ ಬದುಕು ಸೇರಿದಂತೆ ಒಂದೆರಡು ಸಿನಿಮಾಗಳಿಗೆ ಗೀತರಚನೆ ಮಾಡಿದ್ದಾರೆ. ಮುಂಜಾನೆ… ಎಂಬ
ಗೀತೆಗೆ ಎಸ್,ಆರ್.ರಾಮಕೃಷ್ಣ ಇವರು ಸಂಗೀತ ಸಂಯೋಜನೆ ಮಾಡಿದರೆಂದರೆ ಕೇಳಬೇಕೇ? ಅವರು ನಿರಾಳಭಾವದ ಸರಳವಾದ ಸ್ವರಸಂಯೋಜನೆ ಮಾಡಿದ್ದಾರೆ. ಕೀಬೋರ್ಡ್ ನಲ್ಲಿ ತಮ್ಮ ಸಂಗೀತ ಸಂಯೋಜನೆಯ ಗೀತೆಯನ್ನು ಅವರು ಕೀಬೋರ್ಡ್ ನಲ್ಲಿ ನುಡಿಸಿದರೆ ಅವರ ಸಹೋದರಿಯ ಮಗಳು ಅದನ್ನು ಹಾಡುತ್ತಾರೆ. ರಾಮಕೃಷ್ಣ ಅವರು ಪತ್ರಿಕಾ ಮಾಧ್ಯಮಕ್ಕೆ ಸೇರಿದವರು ಹಾಗೂ ಸೃಜನಶೀಲ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡವರು. ಇದರೊಂದಿಗೆ ಅನುವಾದದ ಕೆಲಸವನ್ನೂ ಮಾಡುತ್ತಿದ್ದಾರೆ. ಅವರು ಕನ್ನಡ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಆನಂತರ ಈ ಸ್ವರಸಂಯೋಜನೆ ಮೇರು ಪ್ರತಿಭೆಯ ಗಾಯಕ ದೀಪು ನಾಯರ್ ಅವರ ವ್ಯಾಪ್ತಿಗೆ ಬಂತು. ಅವರ ಸಾಂತ್ವನ ನೀಡುವಂಥ ಧ್ವನಿಯು ಈ ಸಂಗೀತ ರಚನೆಗೆ ಒಂದು ಪರಿಪೂರ್ಣ ಆಯಾಮವನ್ನು ಒದಗಿಸಿದೆ.
ಹಿನ್ನೆಲೆ ಸಂಗೀತದಲ್ಲಿ ಪಾಶ್ಚಿಮಾತ್ಯ ಸಂಗೀತದ ಛಾಯೆಯನ್ನು ಕಾಣಬಹುದು. ಇದು ಹಾಡಿನ ಸಾಹಿತ್ಯದ ಭಾವದೊಂದಿಗೆ ಚೆನ್ನಾಗಿ ಮಿಳಿತಗೊಂಡು ಗಟ್ಟಿಯಾಗಿದೆ. ಈ ಹಾಡು ಪ್ರೇಮ ಮತ್ತು ವ್ಯಾಕುಲತೆಯನ್ನು ಅಭಿವ್ಯಕ್ತಿಸುತ್ತದೆ. ದೀಪು ನಾಯರ್ ಅವರು ಕಳೆದ ಆರು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದು ಈಗ ಮೈಸೂರೇ ಅವರ ಕಾರ್ಯಕ್ಷೇತ್ರವಾಗಿದೆ. ಇವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದು ಸಿನಿಮಾ ಕ್ಷೇತ್ರದಲ್ಲಿ ಅಂದರೆ ಮಲಯಾಳಂನಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಅವರು ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಗಾಯಕರು, ಪಿಟೀಲುವಾದಕರು, ಕೊಳಲುವಾದಕರು, ಕೀಬೋರ್ಡ್ ವಾದಕರೂ ಹೌದು. ಅಲ್ಲದೆ ಸೌಂಡ್ ಇಂಜಿನಿಯರ್ (ಶಬ್ದಗ್ರಹಣ ತಂತ್ರಜ್ಞ), ವಿಡಿಯೋ ಎಡಿಟರ್ ಮತ್ತು ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಣತರು. ಇವರು ಚೆನ್ನೈ ಕಲಾಕ್ಷೇತ್ರದಲ್ಲಿ ತಯಾರಾದವರು. ಇವರು ಹೆಸರಾಂತ-ನೃತ್ಯ ಕ್ಷೇತ್ರದಲ್ಲಿ ನೆಲೆಗೊಂಡಿರುವ ಹಲವಾರು ನೃತ್ಯಪಟುಗಳಿಗೆ ನಟ್ಟುವಾಂಗವನ್ನು ಸಹ ಮಾಡುತ್ತಾರೆ.
ದೀಪು ನಾಯರ್ ಮೂಲತಃ ಕೇರಳದ ಇಡುಕ್ಕಿಯವರು. ಕನ್ನಡವನ್ನು ಸರಾಗವಾಗಿ ಮಾತಾಡುತ್ತಾರೆ. ನಾನು ಚೆನ್ನೈನ ಕಲಾಕ್ಷೇತ್ರವನ್ನು ಸೇರಿದಾಗ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತೆ. ನಾನು ಎಸ್.ಆರ್. ರಾಮಕೃಷ್ಣ ಅವರ (ಎಸ್.ಆರ್.ಆರ್ ಸ್ಟುಡಿಯೋ)
ಸ್ಟುಡಿಯೋ ಸೇರಿದಾಗ, ಕನ್ನಡವನ್ನು ಮಾತಾಡಲು ಶುರುಮಾಡಿದೆ ಎಂದು ಅವರು ಹೇಳುತ್ತಾರೆ. ಫೇಸ್ಬುಕ್ನಲ್ಲಿ ಸಂಗೀತದ ಈ ರೀತಿಯ ಪ್ರಯೋಗ ಪ್ರಾರಂಭವಾಗಿರುವುದು ತನ್ನಂತಹ ಪ್ರತಿಭೆಯನ್ನು ಬಹಳ ಜನರ ಮುಂದೆ ಬೆಳಕಿಗೆ ತರುವ ನಿಟ್ಟಿನಲ್ಲಿ ಒಂದು ಉತ್ತಮ ಅವಕಾಶವಾಗಿದೆ ಎಂದರು.
ಅವರು ತಮ್ಮನ್ನು ಸಂಗೀತದ ಇತರ ಉಪ-ವರ್ಗೀಕರಣದಲ್ಲಿ ಬರುವ ಇಂತಿಂತಹ ನಿದಿಷ್ಟದ ಪ್ರಾಕಾರಕ್ಕೆ ಸೇರಿದವನು ಎಂದು ಗುರುತಿಸಿಕೊಳ್ಳುವುದಕ್ಕಿಂತ, ಕೇವಲ ಸಂಗೀತಗಾರ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ನಾನು ಮಾಧುರ್ಯಭರಿತ ಸಂಗೀತವನ್ನು
ಬಹಳ ಇಷ್ಟಪಡುತ್ತೇನೆ. ಮತ್ತು ಸ್ವರಮೇಳ ವಾದ್ಯವೃಂದ (symphony orchestra)ವನ್ನೊಳಗೊಂಡ ಮಾಧುರ್ಯಪೂರ್ಣ ರಚನೆಗಳೆಂದರೆ ನನಗೆ ಇಷ್ಟ. ಕನ್ನಡ ಸಂಗೀತ ಕ್ಷೇತ್ರದಲ್ಲಿ ಬಹಳ ಒಳ್ಳೆಯ ಗೀತೆಗಳಿವೆ. ರಾಜು ಅನಂತಸ್ವಾಮಿ ಮತ್ತು ಇತರ ಹಲವರು
ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಅತ್ಯಮೂಲ್ಯ ರಚನೆಗಳನ್ನು ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ.
ದೀಪು ಅವರ ಬಾಳಸಂಗಾತಿ ಗೀತಾಭಟ್, ಅವರು ಸಂಗೀತಗಾರ್ತಿ, ಮೂಲತಃ ಸುಳ್ಯದವರು.
ಇದೇ ಮುಂಜಾನೆ ಮುಸುಕಿನಲ್ಲಿ ಗೀತೆಯನ್ನು ಅದೇ ಫೇಸ್ಬುಕ್ ವೇದಿಕೆಯಲ್ಲಿ ಓಹಿಲಾ ಎಂ.ಕೆ ಎಂಬುವವರೂ ಹಾಡಿದ್ದಾರೆ. ಪ್ರವೀಣ್ ರಾವ್ ಅವರು ಹೆಸರಾಂತ ಗಾಯಕಿಯರಾದ ರತ್ನಮಾಲಾ ಪ್ರಕಾಶ್, ಬಿ.ಆರ್.ಗೀತ, ಬಿ.ಜಯಶ್ರೀ, ಸಂಗೀತಾ ಕಟ್ಟಿ ಮುಂತಾದವರ ಜತೆ ಒಟ್ಟಾಗಿ ಕೆಲಸಮಾಡಿದ್ದಾರೆ. ಈ ಫೇಸ್ಬುಕ್ ವೇದಿಕೆಯಲ್ಲಿ ಬಹಳಷ್ಟು ಯುವ ಹಾಗೂ ಹೆಚ್ಚು ಹೆಸರು ಮಾಡದ ಅದರೆ ಪ್ರತಿಭಾವಂತ ಕವಿಗಳು ಮತ್ತು ಸಂಗೀತಗಾರರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಈ ವೇದಿಕೆಯಲ್ಲಿ ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರತಿಭಾವಂತರಾದ ಅನಿವಾಸಿ ಭಾರತೀಯರು ಸಹ ಸೇರಿಕೊಂಡಿದ್ದಾರೆ,
ಬಹಳ ಜನರು ಸಾಮಾಜಿಕ ಜಾಲತಾಣವನ್ನು ವಿಷಕಾರಲು, ಗೇಲಿ ಮಾಡಲು ಮತ್ತು ವ್ಯಕಿಗಳು, ಸರಕಾರ, ಧರ್ಮ ಮತ್ತು ಜಾತಿಯ ವಿರುದ್ಧ ದ್ವೇಷ ಬಿತ್ತಿ ಹರಡಲು ಬಳಸುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಸಾಧಿಸುವುದರ ಮೂಲಕ ಮಾಹಿತಿಯನ್ನು ಒದಗಿಸುವುದು ಮತ್ತು ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದಾರೆ . ಕೆಲವು ಸೃಜನಶೀಲ ಮನಸ್ಸುಗಳು ಮಾತ್ರ ಸಂಕಟದ ಸಮಯದಲ್ಲಿ ಸಂಗೀತದ ಮೂಲಕ ಸಾಂತ್ವನ ನೀಡುವ ಕೆಲಸವನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಡುತ್ತಿವೆ.
ಪ್ರವೀಣ್ ರಾವ್ ಅವರ ಒಳ್ಳೆಯ ಸಂಗೀತಕ್ಕಾಗಿ ಒಂದಾಗಿ ( tag for good music ) ಪ್ರಯತ್ನಕ್ಕೆ ಈಗಾಗಲೇ ಹೆಸರು ಮಾಡಿದವರು, ಹಾಗೂ ಹೆಚ್ಚು ಹೆಸರು ಮಾಡದ ಮತ್ತು ಇನ್ನೂ ಗುರುತಿಸಲ್ಪಡದ ಕವಿಗಳು ಮತ್ತು ಸಂಗೀತಗಾರರಿಂದ ಉತ್ತೇಜನ ದೊರೆಯುವುದೆಂದು ಆಶಿಸೋಣ.
ಆಶಾ ಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು
ಕನ್ನಡಕ್ಕೆ : ಕೆ.ಪದ್ಮಾ
KEY WORDS : music-someyochane-karnataka-kannada-songs-facebook
Posted by Deepu Nair on Monday, April 13, 2020
ENGLISH SUMMARY :
Soothing Music in times of COVID
Music, it is said, is powerful glue. A live example is #someyochane, an initiative by musician Praveen D Rao. His facebook initiative has brought many talented singers, music composers and poets on a single platform to present melodious songs.
One such combination is – Deepu Nair of Mysuru, S R Ramakrishna of Bengaluru and Shashiraj Kavoor of Mangaluru. They have been made to collaborate for producing a song. The result is melody- Munjane Masukinali. It is singer Supriya Raghunandan, who is on the team of Praveen Rao, chose the trio and tagged them in the someyochane fb initiative during this ongoing COVID lockdown.
All three who have been made to team up are highly talented in their chosen field. So when creative minds come together the end product has to be good. And, Munjane Masukinali is one such enjoyable soft song rendered by Deepu Nair.
Shashiraj Kavoor is a poet, actor, dramatist, script-writer and an advocate by profession who is residing in Mangaluru. He has penned songs for a couple of movies including Banna Bannada Baduku. When his Munjane…song was handled by music composer S R Ramakrishna, he settled for a relaxed and simple tune. He played the composition on his keyboard, while his niece sang it. Ramakrishna is a media personality who is into creative writing and translation besides being a journalist. He has also scored music for Kannada films. His composition later came to the domain of Deepu Nair, the super talented singer. His soothing voice has given a perfect dimension to the composition. The background score, which has a tinge of Western style, gel well with the emotions of the lyrics. The song hinges on romance and melancholy.
Now about Deepu Nair, who has made Mysuru as his city from last six years – He is a multitalented musician who has been working in film field, in particular Malayalam. He is a classical vocalist, violinist, flutist, keyboard player, sound engineer, video editor and much more. He is a product of Kalakshetra, Chennai. He also does Nattuvangam for well established classical dancers.
Deepu Nair hails from Idukki of Kerala. He is fluent in Kannada. “When I joined Kalashektra in Chennai, I learned Kannada to read and write. When I joined the SRR Studio, I began talking in Kannada,” he says. He finds the FB initiative on music as a good opportunity for musicians like him to show-case talent to many.
He likes to be just billed as a ‘musician’ rather than sub-categorizing. “I like melodies more… and symphony orchestra kind of arrangements in melodies. There are many good songs in Kannada light music genre. Persons such as Raju Ananthaswamy and others have created gems in Kannada music,” he says.
Deepu is married to Geetha Bhat, a musician and native of Sullia.
The same Munjane Masukinali song is also rendered by Ohila MK, on the same FB platform. Praveen Rao has been able to rope in many well-known singers such as Ratnamala Prakash, B R Geetha, B Jayashree, Sangeeta Katti among others. There are many young and not so popular but talented poets and musicians have also showcased their talent here. Even NRI dance and musical talents have joined the platform.
Many are using social media platforms to spew venom, ridicule and run hate campaigns against individuals, government, religion and caste. There are people who disseminate information and help the needy by networking on social media. There are also creative minds who offer solace through music in this time of distress, on social media. Hope Praveen Rao’s ‘tag for good music’ would continue to get support by known, lesser known and unknown poets and musicians.
–Asha Krishnaswamy