ಕರ್ನಾಟಕ ವಿಧಾನಸಭೆ : ಶೇ.4ರಷ್ಟು ಮುಸ್ಲಿಂ ಕೋಟಾ ಮಸೂದೆ ಅಂಗೀಕಾರ,  ಸ್ಪೀಕರ್ ಮೇಲೆ ಹರಿಹಾಯ್ದ ಬಿಜೆಪಿ ಶಾಸಕರು

Karnataka Assembly passes 4% Muslim quota bill, BJP MLAs opposed this 

ಬೆಂಗಳೂರು, ಮಾ.೨೧,೨೦೨೫:  ಹನಿಟ್ರ್ಯಾಪ್ ಹಗರಣದ ಗೊಂದಲದ ನಡುವೆಯೇ ಸಾರ್ವಜನಿಕ ಗುತ್ತಿಗೆಗಳಲ್ಲಿ ಶೇಕಡಾ 4 ರಷ್ಟು ಮೀಸಲಾತಿ ನೀಡುವ ಮುಸ್ಲಿಂ ಕೋಟಾ ಮಸೂದೆಯನ್ನು ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಮಸೂದೆಯನ್ನು “ಅಸಾಂವಿಧಾನಿಕ” ಎಂದು ಕರೆದಿರುವ ಬಿಜೆಪಿ, ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವುದಾಗಿ ಹೇಳಿದೆ.

ಮಸೂದೆ ಅಂಗೀಕಾರವಾಗುತ್ತಿದ್ದಂತೆ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು. ಅವರು ಸ್ಪೀಕರ್ ಆಸನದ ಮೇಲೆ ಹತ್ತಿ ,  ಶೇಕಡಾ 4 ರಷ್ಟು ಮೀಸಲಾತಿ ಮಸೂದೆ ಪ್ರತಿಯನ್ನು ಹರಿದುಹಾಕಿ, ಸ್ಪೀಕರ್ ಮೇಲೆ ಕಾಗದಗಳನ್ನು ಎಸೆದಾಡಿದರು.

ಬಿಜೆಪಿ ಶಾಸಕ ಭರತ್ ಶೆಟ್ಟಿ ಮಾತನಾಡಿ, ಹನಿಟ್ರ್ಯಾಪ್ ಹಗರಣದ ಬಗ್ಗೆ ಚರ್ಚಿಸುವ ಬದಲು ಮುಖ್ಯಮಂತ್ರಿಗಳು ಶೇ.4ರಷ್ಟು ಮುಸ್ಲಿಂ ಮಸೂದೆಯನ್ನು ಮಂಡಿಸುವಲ್ಲಿ ನಿರತರಾಗಿದ್ದರು. ಕಾಂಗ್ರೆಸ್‌ ಪಕ್ಷದ ಶಾಸಕರುಗಳೇ  ಕಾಗದಗಳನ್ನು ಹರಿದು ನಮ್ಮ ಮೇಲೆ ಪುಸ್ತಕಗಳನ್ನು ಎಸೆದರು. ಆದರೆ ನಾವು ಯಾರಿಗೂ ಹಾನಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮಸೂದೆಯ ಪ್ರಕಾರ, ಮುಸ್ಲಿಂ ಗುತ್ತಿಗೆದಾರರು ಸರ್ಕಾರಿ ಟೆಂಡರ್ಗಳಲ್ಲಿ ಶೇಕಡಾ 4 ರಷ್ಟು ಕೋಟಾವನ್ನು ಪಡೆಯುತ್ತಾರೆ. ಸಮಗ್ರ ಅಭಿವೃದ್ಧಿ ಮತ್ತು ಸಕಾರಾತ್ಮಕ ಕ್ರಮಕ್ಕೆ ತಮ್ಮ ಸರ್ಕಾರದ ಬದ್ಧತೆಗೆ ಈ ಮಸೂದೆ ಹೊಂದಿಕೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಹೇಳಿದರು.

key words: Karnataka Assembly, passes, 4% Muslim quota bill, BJP MLAs, opposed

Karnataka Assembly passes 4% Muslim quota bill, BJP MLAs opposed this