ಬೆಂಗಳೂರು,ಮಾ,17,2020(www.justkannada.in): ಮಹಾಮಾರಿ ಕೊರೋನಾ ವೈರಸ್ ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿದೆ. ಈ ನಡುವೆ ಇಟಲಿಯ ರೋಮ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ತನ್ನ ಮಗಳು ಹಾಗೂ 90 ಮಂದಿ ವಿದ್ಯಾರ್ಥಿಗಳನ್ನ ರಕ್ಷಿಸುವಂತೆ ಅರಣ್ಯ ಸಚಿವ ಆನಂದ್ ಸಿಂಗ್ ಮನವಿ ಮಾಡಿದ್ದಾರೆ.
ಈ ಕುರಿತು ಇಂದು ಮಾತನಾಡಿರುವ ಸಚಿವ ಆನಂದ್ ಸಿಂಗ್, ನನ್ನ ಮಗಳು ಸೇರಿ 90 ಮಂದಿ ರೋಮ್ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ನಿನ್ನೆವರೆಗೆ ನನ್ನ ಮಗಳ ಅಪ್ ಡೇಟ್ ಬಂದಿದೆ. ನಿನ್ನೆ ರಾತ್ರಿ ನನ್ನ ಮಗಳ ಜತೆ ಮಾತನಾಡಿದ್ದೇನೆ. ಬಳಿಕ ನನ್ನ ಮಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ರಾಯಭಾರಿ ಇಂದು ಮಧ್ಯಾಹ್ನದವರೆಗೆ ಊಟದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರಂತೆ. ಹೀಗಾಗಿ ಅಲ್ಲಿ ಸಿಲುಕಿರುವ ಎಲ್ಲರೂ ಆತಂಕಕ್ಕೀಡಾಗಿದ್ದಾರೆ ಎಂದು ಹೇಳಿದರು.
ರೋಮ್ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಹೆಚ್ಚಾಗಿದೆ ಎಂದು ನನ್ನ ಮಗಳು ತಿಳಿಸಿದ್ದಾಳೆ. ವಿಮಾನ ಹಾರಾಟ ನಡೆಸದಂತೆ ಕೇಂದ್ರ ಆದೇಶಿಸಿದೆ. ಅದ್ದರಿಂದ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಏನು ಮಾಡಬೇಕು…? ಹೀಗಾಗಿ ಏರ್ ಲಿಫ್ಟ್ ಮಾಡಿ ಅಲ್ಲಿರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನ ರಕ್ಷಿಸುವಂತೆ ಸಚಿವ ಆನಂದ್ ಸಿಂಗ್ ಮನವಿ ಮಾಡಿದ್ದಾರೆ.
Key words: my daughter- students- stranded – Rome airport –Minister- Anand Singh -appeals – protection.