ಮೈಸೂರು,ಮಾರ್ಚ್,2,2021(www.justkannada.in): ಮೀಸಲಾತಿಗಾಗಿ ಹಲವು ಸಮುದಾಯಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದು ಈ ಮಧ್ಯೆ ಒಕ್ಕಲಿಗ ಸಮುದಾಯವೂ ಸಹ ಮೀಸಲಾತಿಗಾಗಿ ಆಗ್ರಹಿಸುತ್ತಿದೆ. ಆದರೆ ಇದಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿರುವ ಸಚಿವ ಸಿ.ಪಿ ಯೋಗೇಶ್ವರ್, ಒಕ್ಕಲಿಗರಿಗೆ ಮೀಸಲಾತಿ ನೀಡೋದಕ್ಕೆ ನನ್ನ ವಿರೋಧ ಇದೆ. ಸಂವಿಧಾನ ಬದ್ಧವಾಗಿ ಯಾರಿಗೆ ಏನ್ ಸಿಗಬೇಕು ಅದೆ ಇನ್ನು ದಕ್ಕಿಲ್ಲ. ಸಮಾಜದಲ್ಲಿ ಇನ್ನು ಶೋಷಿತ ವರ್ಗಕ್ಕೆ ಮೀಸಲಾತಿ ಸರಿಯಾಗಿ ಸಿಕ್ಕಿಲ್ಲ. ಮೊದಲು ಅಂತಹ ಅಶಕ್ತರಿಗೆ ಮೀಸಲಾತಿ ಸಿಗಬೇಕು. ಅದನ್ನ ಬಿಟ್ಟು ಎಲ್ಲಾ ಇರೋರು ಶಕ್ತಿ ಪ್ರದರ್ಶನ ಮಾಡಿದ್ರೆ ಏನರ್ಥ ಎಂದು ಪ್ರಶ್ನಿಸಿದರು.
ಆ ರೀತಿ ಶಕ್ತಿ ಪ್ರದರ್ಶನ ಮಾಡೋದಕ್ಕೆ ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ಹಾಗಾಗಿ ಮೇಲ್ವರ್ಗಕ್ಕೆ ಮೀಸಲಾತಿಗೆ ನನ್ನ ಬೆಂಬಲ ಇಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ಸ್ಪಷ್ಟನೆ ನೀಡಿದರು.
Key words: My opposition – reservation – vokkaliga-Minister -C.P. Yogeshwar.