ಮೈಸೂರು,23,2021(www.justkannada.in): ಆರ್.ಎಸ್.ಎಸ್ ಸಂಘಟನೆ ಬಗ್ಗೆ ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ದ. ತಾಲಿಬಾನ್ ಹಾಗೂ ಆರ್.ಎಸ್.ಎಸ್ ಸಂಘಟನೆಗೆ ಕೆಲವು ಹೋಲಿಕೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಮಹಿಳೆಯರಿಗೆ ಆರ್.ಎಸ್.ಎಸ್ ನಲ್ಲಿ ಪ್ರಾತಿನಿಧ್ಯ ಇಲ್ಲ. ಧರ್ಮವನ್ನು ಇಟ್ಟುಕೊಂಡು ಆರ್.ಎಸ್.ಎಸ್. ಹಾಗೂ ತಾಲಿಬಾನ್ ಕೆಲಸ ಮಾಡುತ್ತದೆ. ಈ ಎಲ್ಲಾ ವಿಚಾರವನ್ನ ನಾನು ತಾಲಿಬಾನ್ ಜೊತೆ ಆರ್.ಎಸ್.ಎಸ್ ಹೋಲಿಕೆ ಮಾಡಿದೆ. ಬಿಜೆಪಿಯವರು, ಆರ್.ಎಸ್.ಎಸ್ ನವರು ಯಾವುದೇ ಹೋರಾಟ ಮಾಡಿದರೂ ನನ್ನ ಹೇಳಿಕೆ ಬದ್ದನಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದರು.
ನಮಗೆ ಮೇಯರ್ ಸ್ಥಾನ ಸಿಗುವ ವಿಶ್ವಾಸವಿದೆ.
ಮೈಸೂರು ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷ ಆರ್.ದೃವನಾರಾಯಣ್, ಈ ಹಿಂದೆ ನಡೆದ ಮಾತುಕತೆಯಂತೆ ಈ ಆರು ತಿಂಗಳು ಕಾಂಗ್ರೆಸ್ ಗೆ ಮೇಯರ್ ಸ್ಥಾನ ಬೇಕು. ಉಳಿದ ಅವಧಿಯ ಮೇಯರ್, ಉಪ ಮೇಯರ್ ಜೆ.ಡಿ.ಎಸ್ ಇಟ್ಟುಕೊಳ್ಳಲಿ. ಈ ಮಾತನ್ನ ಜೆ.ಡಿ.ಎಸ್ ಕೂಡ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಈ ವಿಚಾರವಾಗಿ ಸಾ.ರಾ.ಮಹೇಶ್ ಜೊತೆ ಮಾತನಾಡಿದೆ. ಮೊದಲಿಗೆ ಕಾರ್ಪೋರೇಟರ್ ಅಭಿಪ್ರಾಯ ಪಡೆದು ಮಾತನಾಡುತ್ತೇನೆ ಎಂದು ಹೇಳಿದ್ದರು. ಆದರೆ ನಿನ್ನೆ ಅವರಿಗೆ ಕರೆ ಮಾಡಿದ್ದೆ ಆದರೆ ನನ್ನ ಕರೆಯನ್ನು ಸ್ವೀಕಾರ ಮಾಡಿಲ್ಲ. ನಮಗೆ ಮೇಯರ್ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಹೈವೆಯ ಶ್ರೇಯಸ್ಸು ಎಲ್ಲಾ ಜನಪ್ರತಿನಿಧಿಗಳಿಗೂ ಸೇರುತ್ತೆ.
ಇನ್ನು ಬೆಂಗಳೂರು-ಮೈಸೂರು ಹೈವೆ ಶ್ರೇಯಸ್ಸು ಎಲ್ಲಾ ಜನಪ್ರತಿನಿಧಿಗಳೂ ಸೇರುತ್ತೆ. 2013ರಲ್ಲೇ ಅದರ ಪ್ರಾಜೆಕ್ಟ್ ರೆಡಿಯಾಗಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಸೇರಿ ಆಸ್ಕರ್ ಫರ್ನಾಂಡೀಸ್ ಜೊತೆ ಪ್ರಯತ್ನ ಮಾಡಿದ್ದರು. ಹೆಚ್ ವಿಶ್ವನಾಥ್ ಅವರ ಜೊತೆಗೂಡಿ ನಾನೂ ಕೂಡಾ ಆ ಪ್ರಯತ್ನದಲ್ಲಿ ಇದ್ದೆ. ನಂತರ ಎನ್.ಡಿ.ಎ ಸರ್ಕಾರ ಬಂತು. ಪ್ರತಾಪ್ ಸಿಂಹ ಕೂಡಾ ಅದರ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಈ ಹೈವೆಯ ಶ್ರೇಯಸ್ಸು ಎಲ್ಲಾ ಜನಪ್ರತಿನಿಧಿಗಳಿಗೂ ಸೇರುತ್ತೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಹೇಳಿದರು.
ENGLISH SUMMARY…..
KPCC working president Dhurvanarayan defends his statement on RSS
Mysuru, August 23, 2021 (www.justkannada.in): “Even today I defend my statement on RSS. There are certain similarities between the RSS and Taliban,” opined KPCC Working President R. Dhruvanarayan.
Speaking in Mysuru today he explained that there is no entry for women in RSS. Both the RSS and Taliban are working based on religion. “That is why I compare RSS with Taliban. I am committed about whatever I speak about both BJP and RSS,” he said.
In his response about the Mysuru mayoral elections, he informed that the Congress party needs the Mayor post for the next months. “Let the JDS retain both the Mayor and Deputy Mayor posts for the remaining period. The JDS had given a public statement regarding this. I had discussed this with Sa. Ra. Mahesh about this. He had informed that he would get the opinion of the Corporator first. I had called him yesterday, but he didn’t receive my call. Anyway, I am hopeful that we will get the Mayor post,” he added.
Keywords: KPCC Working President/ R. Dhurvanarayan/ defends/ RSS statement/ Taliban
Key words: my statement -about –RSS-taliban-KPCC President -Dhruvanarayan.