ನವದೆಹಲಿ,ಜೂ,18,2019(www.justkannada.in): ಸಂಸದರು ಏನು ಮಾಡಲಾಗಲ್ಲ. ಎಲ್ಲವೂ ರಾಜ್ಯ ಸರ್ಕಾರದ ಕೈಯಲ್ಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿಯಾದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುಮಲತಾ ಅಂಬರೀಶ್, ನಾನು ಆರೀತಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಬಳಿ ಸ್ಪಷ್ಟನೆ ನೀಡಿರುವ ಸಂಸದೆ ಸುಮಲತಾ ಅಂಬರೀಶ್, ಎಲ್ಲವೂ ರಾಜ್ಯ ಸರ್ಕಾರದ ಕೈಯಲ್ಲಿದೆ. ಸಂಸದರು ಏನನ್ನು ಮಾಡಲು ಆಗಲ್ಲ ಎಂದು ಹೇಳಿಕೆ ನೀಡಿಲ್ಲ. ನಿನ್ನೆ ನೀಡಿದ್ದ ಹೇಳಿಕೆಯನ್ನ ತಿರುಚಲಾಗಿದೆ. ನನ್ನ ಹೇಳಿಕೆ ಬಗ್ಗೆ ಬೇರೆ ಬೇರೆ ರೀತಿ ಟ್ವಿಸ್ಟ್ ಮಾಡಲಾಗುತ್ತಿದೆ. ನನ್ನ ಸ್ವಭಾವದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೇಜವಾಬ್ದಾರಿತನದ ಸ್ವಭಾವ ನನ್ನದಲ್ಲ. ಈ ರೀತಿ ಹೇಳುವ ಅವಿವೇಕಿ ನಾನಲ್ಲ ಎಂದು ನುಡಿದರು.
ಮಂಡ್ಯ ರೈತರ ಪರವಾಗಿ ನನ್ನ ಆದ್ಯತೆ. ಬೇರೆ ರಾಜಕಾರಣಿಗಳ ತರ ನನ್ನನ್ನ ನೋಡಬೇಡಿ. ಸಂಸದೆಯಾಗಿ ನನ್ನ ಮೇಲೆ ಜವಾಬ್ದಾರಿ ಇದೆ. ಜವಾಬ್ದಾರಿಯಿಂದ ನಾನು ನುಣುಚಿಕೊಳ್ಳುವುದಿಲ್ಲ. ಅಂಬರೀಶ್ ಮೇಲೆ ಆಣೆ ಮಾಡಿ ಹೇಳಿದಂತೆ ನಡೆದುಕೊಳ್ಳುವೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ರಾಜ್ಯ ಸರ್ಕಾರ ಕಾನೂನು ಹೋರಾಟ ಮಾಡಬೇಕಿದೆ. ಎಲ್ಲರೂ ಒಗ್ಗೂಡಿ ಹೋರಾಡಬೇಕು ಎಂದು ಸುಮಲತಾ ಅಂಬರೀಶ್ ತಿಳಿಸಿದರು.
Key words: My statement- twisted-MP Sumalatha Ambarish -clarified