ನನ್ನ ಹೇಳಿಕೆಯನ್ನು ತಪ್ಪು ಅರ್ಥಗಳಿಗೆ ಎಡೆಮಾಡಬೇಡಿ : ಸಾಹಿತಿ ಡಾ.ದೊಡ್ಡರಂಗೇಗೌಡ

ಬೆಂಗಳೂರು,ಫೆಬ್ರವರಿ,22,2021(www.justkannada.in) : ನನ್ನ ಹೇಳಿಕೆ ದಲಿತರ ವಿರುದ್ಧವಾದುದ್ದಲ್ಲ, ಉಳ್ಳವರ ವಿರುದ್ಧವಾದದ್ದು, ಬಡವರ ಪರವಾದದ್ದು, ಇದು ತಪ್ಪು ಅರ್ಥಗಳಿಗೆ ಎಡೆಮಾಡಬಾರದು. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಸಾಹಿತಿ ದೊಡ್ಡರಂಗೇಗೌಡ ಸ್ಪಷ್ಟನೆ ನೀಡಿದ್ದಾರೆ.My statement-wrong-meanings-Don't give up-writer-Dr. Doddarangegowda

ಏಕರೂಪ ಶಿಕ್ಷಣ ಜಾರಿಗೆ ಸಂವಿಧಾನದಲ್ಲಿ ಮಾರ್ಪಾಟು ಮಾಡುವುದು ಸೂಕ್ತ

ಹಾಸನದಲ್ಲಿ ಮಾತನಾಡುವಾಗ ನಮ್ಮದು ಬಹುಮುಖಿ ರಾಷ್ಟ್ರ. ಆದರೂ, ಏಕರೂಪದ ಶಿಕ್ಷಣ ಇಲ್ಲಿಲ್ಲ. ಈಗ ನಮಗೆ ನಮ್ಮ ದೇಶದಲ್ಲಿ ಏಕರೂಪ ಶಿಕ್ಷಣ ಅನಿವಾರ್ಯ ಎಂದು ಅನ್ನಿಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮೊದಲು ನಮ್ಮಲ್ಲಿ  ಏಕರೂಪದ ಶಿಕ್ಷಣ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಭಾರತದ ಸಂವಿಧಾನದಲ್ಲಿ ಮಾರ್ಪಾಟು ಮಾಡುವುದು ಸೂಕ್ತವಾದೀತು ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅನುಭವ ಮಂಟಪದ ಮಾದರಿ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕು

My statement-wrong-meanings-Don't give up-writer-Dr. Doddarangegowda
ಕೃಪೆ-internet

ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಬಲ್ಲಿದರು ಹೆಚ್ಚಿನ ಲಾಭಗಳನ್ನು ಗಳಿಸುತ್ತಿದ್ದಾರೆ. ಎಲ್ಲರಿಗೂ ಒಂದೇ ರೀತಿ ಶಿಕ್ಷಣ ದೊರೆಯುವಂತಾಗಬೇಕು. ಆಗ ಮಾತ್ರ ಸಮಾನತೆ ಸಾಧ್ಯ. ಉಳ್ಳವರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ, ಸಾಮಾಜಿಕ ನ್ಯಾಯ ಸಿಗದಂತಾಗಿದೆ. 12ನೇ ಶತಮಾನದ ಅನುಭವ ಮಂಟಪದ ಮಾದರಿ ಎಲ್ಲರಿಗೂ (ಹಿಂದುಳಿದವರಿಗೆ ಹೆಚ್ಚಿನ)ಅವಕಾಶ ಸಿಗುವಂತಾಗಬೇಕು. ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಬಾರದು ಎಂದು ಮಾತನಾಡಿದ್ದೆ ಎಂದು ತಿಳಿಸಿದ್ದಾರೆ.

key wrods : My statement-wrong-meanings-Don’t give up-writer-Dr. Doddarangegowda