ಬೆಂಗಳೂರು, ಅಕ್ಟೋಬರ್,18,2021(www.justkannada.in): ಮಂಡ್ಯ ಮೈ ಶುಗರ್ ಕಾರ್ಖಾನೆ ಖಾಸಗೀಕರಣ ವಿಚಾರವನ್ನು ಸರ್ಕಾರ ಕೈಬಿಟ್ಟಿದ್ದು, ಇದೀಗ ಮುಂದಿನ ವರ್ಷದಿಂದ ಕಾರ್ಖಾನೆ ಪುನಾರಂಭಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಮೈ ಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಕೊನೆಗೂ ಮಂಡ್ಯ ಜನಪ್ರತಿನಿಧಿಗಳು ಮತ್ತು ರೈತರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಖಾಸಗೀಕರಣ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿಯಲಾಗಿದೆ.
ಸಭೆ ಬಳಿಕ ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮುಂದಿನ ವರ್ಷದಿಂದ ಕಬ್ಬು ನುರಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುವುದು. ಕಾರ್ಖಾನೆ ಪುನಃಶ್ಚೇತನಕ್ಕೆ ತಕ್ಷಣವೇ ತಜ್ಞರ ಸಮಿತಿ ನೇಮಕ ಮಾಡಲಾಗುವುದು. ಮೂರು ತಿಂಗಳಲ್ಲಿ ತಜ್ಞರ ಸಮಿತಿ ವರದಿ ನೀಡಲಿದೆ. ಕಾರ್ಖಾನೆಯ ಪುನಃಶ್ಚೇತನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಆಡಳಿತಾಧಿಕಾರಿ ನೇಮಕವಾಗಲಿದೆ, ಅಗತ್ಯ ಹಣ ಬಿಡುಗಡೆ ಹಾಗೂ ಬೇಕಾದ ಎಲ್ಲ ಯಂತ್ರೋಪಕರಣ ರಿಪೇರಿಗೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.
Key words: My Sugar- Factory – government – abandoned –privatization-CM Basavaraj bommai
ENGLISH SUMMARY…
Govt. drops plan to privatise MySugar factory: CM announces to start the factory from next year
Bengaluru, October 18, 2021 (www.justkannada.in): The State Government has dropped the idea of privatising the MySugar factory in Mandya. Chief Minister Basavaraj Bommai has announced that the factory will start functioning from next year.
In a meeting held under the leadership of the Chief Minister today, it was decided to run the factory under government aid. At last, the State Government has surrendered at least temporarily to the elected representatives and farmers’ pressure by stepping away from privatising the MySugar factory.
Speaking after the meeting today, Chief Minister Basavaraj Bommai informed all necessary measures will be taken to commence the factory from next year. “An expert committee will be formed immediately for the revival of the MySugar factory. All necessary preparations will be made for its rejuvenation. Appointment of an administrative officer, releasing of required funds for machinery repair and other purposes will be done soon,” he added.
Keywords: Chief Minister Basavaraj Bommai/ MySugar factory/ privatisation/ drops proposal