ಬೆಂಗಳೂರು,ಸೆಪ್ಟಂಬರ್,8,2021(www.justkannada.in): ಜಾತಿ ಜನಗಣತಿ ವರದಿ ವರದಿ ಸ್ವೀಕರಿಸಲಿಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ನನ್ನ ಅವಧಿಯಲ್ಲಿ ಜಾತಿ ಜನಗಣತಿ ವರದಿ ಸಿದ್ಧವಾಗಿಯೇ ಇರಲಿಲ್ಲ ಹೀಗಿರುವಾಗ ವರದಿಯನ್ನು ಸ್ವೀಕರಿಸಲು ಹೇಗೆ ಸಾಧ್ಯ ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಅವರು ವರದಿಯನ್ನ ಸ್ವೀಕರಿಸಲಿಲ್ಲ ಎಂದು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.
ಈ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಜಾತಿ ಜನಗಣತಿ ಇನ್ನು ಹೊರಗಡೆಯೇ ಬಂದಿಲ್ಲ. ಎಲ್ಲಾದರೂ ಬಿಡುಗಡೆ ಆಗಿದೆಯಾ ? ನಿಮಗೇನಾದ್ರೂ ಗೊತ್ತಾ ? ಅದರ ಮಾಹಿತಿ ಸೋರಿಕೆ ಆಗಿಲ್ಲ. ಅದರಲ್ಲಿ ಏನಿದೆ ಎನ್ನುವುದೇ ಗೊತ್ತಿಲ್ಲ. ಅವರಿಗೇನಾದ್ರೂ ಗೊತ್ತಾಗಿದೆಯಾ ? ನನಗೆ ಗೊತ್ತಿರುವ ಪ್ರಕಾರ ಜಾತಿ ಜನಗಣತಿ ಮಾಹಿತಿ ಸೋರಿಕೆಯಾಗಿಲ್ಲ. ಎಲ್ಲಾ ಜಾತಿಗಳಿಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಏನು ಎನ್ನುವುದನ್ನು ಅರಿಯಲು ಸಮೀಕ್ಷೆ ನಡೆಸಲಾಗಿದೆ. ಸಾಮಾಜಿಕ ನ್ಯಾಯ ಸಿಗಬೇಕಾದರೆ ದಾಖಲಾತಿಯ ಅಗತ್ಯವಿದೆ. ದಾಖಲಾತಿ ಇಲ್ಲದೆ ಸಾಮಾಜಿಕ ನ್ಯಾಯ ಅಸಾಧ್ಯ. ಆ ಉದ್ದೇಶದಿಂದ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ನಾವು ಯಾವ ಜಾತಿ, ವರ್ಗದ ವಿರುದ್ಧವೂ ಇಲ್ಲ ಎಂದರು.
ಹೈಕಮಾಂಡ್ ಒಂದು ಸಮಿತಿ ಮಾಡಿದ್ದಾರೆ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಅವರು ಅಧ್ಯಯನ ಮಾಡಿ ವರದಿ ಕೊಡಲಿ. ಇಡೀ ದೇಶದಲ್ಲೇ ಮೊದಲು ಜಾತಿ ಸಮೀಕ್ಷೆ ನಡೆದಿದೆ. ಕರ್ನಾಟಕದಲ್ಲಿ ಮೊದಲು ಸಮೀಕ್ಷೆ ನಡೆದಿದೆ. ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ವರದಿ ಸ್ವೀಕಾರ ಮಾಡಲು ಒಪ್ಪಿಲ್ಲ. ಈಗಲೂ ಹಾಗೇ ಇದೆ. ವರದಿಯಲ್ಲಿ ಒಕ್ಕಲಿಗ, ಲಿಂಗಾಯತರನ್ನು ಅಲ್ಪಸಂಖ್ಯಾತರೆಂಬ ಉಲ್ಲೇಖ ಮಾಡಲಾಗಿದೆ ಅಂತಾ ನೀವೇ ಏನೇನೋ ಹೇಳಬೇಡಿ ಎಂದು ಸಿದ್ಧರಾಮಯ್ಯ ಹೇಳಿದರು.
Key words: my time – caste census -report – not ready-accept-Former CM -Siddaramaiah.