ಮೈಸೂರು,ಡಿಸೆಂಬರ್,27,2020(www.justkannada.in) : ಇಡೀ ಸಮುದಾಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಕುರುಬ ಸಮಾಜ ಎಸ್ಟಿ ಸೇರ್ಪಡೆ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಚಳವಳಿ ಕೂಡ ಮಾಡುತ್ತೇವೆ. ಇದು ನನ್ನ, ಈಶ್ವರಪ್ಪ, ಸಿದ್ದರಾಮಯ್ಯ ಪ್ರತಿಷ್ಟೆ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
29ಕ್ಕೆ ಮೈಸೂರಿನಲ್ಲಿ ಕುರುಬ ನಾಯಕರ ಸಭೆ ಏರ್ಪಡಿಸಲಾಗಿದೆ. ಅಲ್ಲಿ ಹೋರಾಟದ ಮುಂದಿನ ರೂಪುರೇಷೆ ಮಾಡಲಾಗುತ್ತೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ಜಗತ್ತಿನಾದ್ಯಂತ ವಿಶಿಷ್ಠವಾದ ಸಮುದಾಯಗಳನ್ನು ಎಸ್ಟಿ ಗೆ ಸೇರಿಸುವ ಪರಿಪಾಠ ಇದೆ. ಕುರುಬ ಸಮುದಾಯ ಪ್ರಮುಖ ಸಂಸ್ಕೃತಿ ಅಲೆಮಾರಿತನ. ಈಗಲೂ ರಸ್ತೆಗಳಲ್ಲಿ, ಕುರಿಗಾಯಿಗಳನ್ನು ಪ್ರದೇಶದಿಂದ ಪ್ರದೇಶಕ್ಕೆ ಸಂಚಾರಿಗಳು ಇದ್ದಾರೆ. ಅಂತಹ ಜೀವನ ಶೈಲಿ ಈಗಲೂ ಉಳಿಸಿಕೊಂಡಿದ್ದೇವೆ. ನಾವು ಎಲ್ಲರ ಸಹಕಾರ ಕೇಳುತ್ತಿದ್ದೇವೆ ಎಂದಿದ್ದಾರೆ.
ನಿರಂಜನಾನಂದಪುರ ಸ್ವಾಮಿಗಳ ಮೂಲಕ ನಾನು ಹಾಗೂ ಸೋಮಶೇಖರ್ ವರದಿ ಸರ್ಕಾರಕ್ಕೆ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಕೂಡ ಕುರುಬ ಸಮುದಾಯದ ಸಂಪ್ರದಾಯ ಮನಗಂಡು ಎಸ್ಟಿ ಸೇರ್ಪಡೆ ಮಾಡಬೇಕು. ಮೇಲ್ವರ್ಗದ ಜನ ಕೂಡ ನಮಗೆ ಸಹಕಾರ ನೀಡುವ ಮೂಲಕ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
key words : My-Ishwarappa-Siddaramaiah-Prestige-Mysore-D.29-Meeting- Shepherd-Leaders-MLC Vishwanath