ಮೈಸೂರು,ಆ,21,2019(www.justkannada.in): ಬಿಇಎಂಎಲ್ ಖಾಸಗೀಕರಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಭಾರತ್ ಅರ್ಥ್ ಮೂವಸ್೯ ಎಂಪ್ಲಾಯಿಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿಇಎಂಎಲ್ ಕಾರ್ಖಾನೆಯ ಬಳಿ ಅರ್ಥ್ ಮೂವಸ್೯ ಎಂಪ್ಲಾಯಿಸ್ ಅಸೋಸಿಯೇಷನ್ ವತಿಯಿಂದ ನೌಕರರು ಪ್ರತಿಭಟನೆ ನಡೆಸಿದರು. ಬಿಇಎಂಎಲ್ ಸಂಸ್ಥೆ ಯು ರಕ್ಷಣೆಗೆ ಬೇಕಿರುವ ಎಲ್ಲ ಸಲಕರಣೆಗಳನ್ನು ಸಿದ್ದಪಡಿಸುತ್ತಿದೆ. ಬಿಇಎಂಎಲ್ ಖಾಸಗೀಕರಣವನ್ನು ಮಾಡಲು ಮುಂದಾಗಿದೆ. ಇದು ಕೇಂದ್ರ ರಕ್ಷಣ ಸಚಿವಾಲಯದ ಅಧೀನದಲ್ಲಿದೆ. ಏಷ್ಯಾದಲ್ಲೇ ಅತಿದೊಡ್ಧ ಸಂಶೋಧನೆ ಕೇಂದ್ರವಾಗಿದೆ. ವಾರ್ಷಿಕವಾಗಿಯೂ ಸುಮಾರು 3500 ಕೋಟಿ ವಹಿವಾಟು ಮಾಡುತ್ತಿದೆ.ಇಂತಹ ಬೃಹತ್ ವಲಯವನ್ನು ಕೇಂದ್ರ ಸರ್ಕಾರ ಶೇ 26 ರಷ್ಟು ಷೇರನ್ನು ಖಾಸಗಿಯವರಿಗೆ ಮಾರಟ ಮಾಡುವ ತೀರ್ಮಾನ ಖಂಡನೀಯ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇದರಿಂದ ಸಂಸ್ಥೆಯ 8500 ಖಾಯಂ ಉದ್ಯೋಗಿಗಳು ಹಾಗೂ ಗುತ್ತಿಗೆ ಕಾರ್ಮಿಕರಿಗೂ ಕೆಲಸದ ಅಭದ್ರತೆ ತೋರುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಖಾಸಗಿಯವರಿಗೆ ಷೇರು ಮಾರಾಟ ತೀರ್ಮಾನವನ್ನು ಕೈ ಬಿಡಬೇಕೆಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
Key words: myosre-Opposition – privatization -f BEML-Protests – Bharat Earth Movers Employees Association …