ಮೈಸೂರು,ಸೆಪ್ಟಂಬರ್,21,2022(www.justkannada.in): ಮಕ್ಕಳಿಗೆ ಬಾಲ್ಯದಲ್ಲೇ ಕೈ ತೊಳೆಯುವ ವಿಧಾನ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಪೋಷಕರು ಅರಿವು ಮೂಡಿಸಬೇಕು. ಬಾಯಿಯ ಆರೋಗ್ಯ ಕಾಪಾಡಿಕೊಂಡರೆ ದೇಹದ ಆರೋಗ್ಯ ವೃದ್ಧಿಸುತ್ತದೆ ಎಂದು ಪದ್ಮಶ್ರೀ, ಬೆಂಗಳೂರು ಜಯದೇವ ಹೃದಯ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆದ ಅಸೋಸಿಯೇಷನ್ ಆಫ್ ಮೈಕ್ರೋಬಯಾಲಜಿಸ್ಟ್ಸ್ ಆಫ್ ಇಂಡಿಯಾದ 62ನೇ ವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು. ಬಾಯಿಯಲ್ಲೇ ನಮ್ಮ ಆರೋಗ್ಯದ ಗುಟ್ಟು ಇದೆ. ಬಾಯಿಯಿಂದಲೇ ನಮ್ಮ ದೇಹಕ್ಕೆ ಆಹಾರ ಸೇರುತ್ತದೆ. ಹಾಗಾಗಿ ಕೈಯಿಂದ ತಿನ್ನುವ ಪದಾರ್ಥಗಳ ಬಗ್ಗೆ ಎಚ್ಚರಿಕೆ ಇರಬೇಕು. ಊಟ ಮಾಡುವ ಮುನ್ನ ಚೆನ್ನಾಗಿ ಕೈ ತೊಳೆಯಬೇಕು. ತುಂಬಾ ಜನ ಊಟದ ನಂತರ ನೀಟಾಗಿ ಕೈ ತೊಳೆಯುತ್ತಾರೆ. ಆದರೆ, ಊಟಕ್ಕೆ ಮುನ್ನ ಕೈ ತೊಳೆಯುವುದನ್ನು ಮರೆಯುತ್ತಾರೆ ಎಂದರು.
ಅಮೆರಿಕಾದ ಆಂತರಿಕ ಸಮೀಕ್ಷೆ ಪ್ರಕಾರ, ಹೆರಿಗೆ ಸಮಯದಲ್ಲೂ ಆಸ್ಪತ್ರೆ ಸಿಬ್ಬಂದಿ ಸ್ವಚ್ಛತೆ ಕಾಪಾಡಿಕೊಳ್ಳದ ಪರಿಣಾಮ ಶಿಶುಮರಣ ಹೆಚ್ಚಾಗಿದೆ. ಹಾಗಾಗಿ ವೈದ್ಯರು ಹಾಗೂ ದಾದಿಯರು ಕೂಡ ಸ್ವಚ್ಛತೆಗೆ ಆದ್ಯತೆ ನಡಬೇಕು. ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ಒಳ್ಳೆಯ ನಿದ್ರೆ, ವ್ಯಾಯಾಮ, ಯೋಗ, ಹಣ್ಣು ತರಕಾರಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಕುಡಿತ ಹಾಗೂ ಧೂಮಪಾನ ಬಿಟ್ಟರೆ ಹಲವು ಕಾಯಿಲೆಗಳಿಂದ ದೂರ ಇರಬಹುದು. ಕಮ್ಯೂನಿಟಿ ಚೆನ್ನಾಗಿದ್ದರೆ ಇಮ್ಯೂನಿಟಿ ಉತ್ತಮವಾಗಿರುತ್ತದೆ ಎಂದು ಹೇಳಿದರು.
ವಿಜ್ಞಾನ ಕ್ಷೇತ್ರದಲ್ಲಿ ಪ್ರತ್ಯೇಕ ಆ್ಯಂಟಿ ಬಯೋಟಿಕ್ ಪಾಲಿಸಿ ಇದೆ. ಅಜಿತ್ರೋ ಮೈಸಿನ್ ಕೋವಿಡ್ ಸಮಯದಲ್ಲಿ ಹೆಚ್ಚು ದುರ್ಬಳಕೆ ಆಗಿದೆ. ಕೋವಿಡ್ ವಾಸಿಯಾದರೂ ದೇಹದಲ್ಲಿ ಅದು ದೀರ್ಘಕಾಲ ಇರುತ್ತದೆ. ಕೊರೊನಾ ಬಂದು ಹೋದ ವ್ಯಕ್ತಿಯಲ್ಲಿ ಶೇ.5ರಷ್ಟು ಹೃದಯಸಂಬಂಧಿ ಕಾಯಿಲೆ ಬರಬಹುದು. ಶೇ.2 ರಷ್ಟು ಮಧುಮೇಹ (ಶೇ.2) ಬರುವ ಸಾಧ್ಯತೆ ಇರುತ್ತದೆ. ಇದರಿಂದ ತೂಕ ಕಳೆದುಕೊಳ್ಲುವುದು ಅಲರ್ಜಿ ಸಮಸ್ಯೆಯೂ ಬರುತ್ತದೆ ಎಂದು ತಿಳಿಸಿದರು.
ನಮ್ಮ ಜೀವನ ಶೈಲಿ ಉತ್ತಮವಾಗಿದ್ದರೆ ದೇಹವೂ ಸದೃಢವಾಗಿರುತ್ತದೆ. ಶುದ್ಧ ಗಾಳಿ ಹಾಗೂ ನೀರಿನಿಂದ ಬಹುತೇಕ ಕಾಯಿಲೆಗಳನ್ನು ದೂರ ಇಡಬಹುದು. ಕುದಿಸಿ ಆರಿಸಿದ ನೀರಿಗೆ ಮೊದಲ ಆದ್ಯತೆ ನೀಡಬೇಕು. ನೈಸರ್ಗಿಕ ತರಕಾರಿ ಹಾಗೂ ಹಣ್ಣು ಸೇವನೆ ಬಗ್ಗೆ ಗಮನ ಹರಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಯ್ಯಪ್ಪನ್ ಮಾತನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಡಿಆರ್ಡಿಒ-ಡಿಎಫ್ ಆರ್ಎಲ್ ನಿರ್ದೇಶಕ ಡಾ. ಅನಿಲ್ ದತ್ ಸೆಮ್ವಾಲ್, ನವದೆಹಲಿ ಅಕಾಡೆಮಿ ಆಫ್ ಮೈಕ್ರೋ ಬಯೋಲಾಜಿಕಲ್ ಸೈನ್ಸಸ್ ಅಧ್ಯಕ್ಷ ಪ್ರೊ.ಆರ್.ಸಿ.ಕುಹಾದ್, ಎಎಂಐ ಅಧ್ಯಕ್ಷ ಪ್ರೊ. ಪ್ರವೀಣ್ ರಿಷಿ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ, ಪ್ರೊ. ನಮಿತಾ ಸಿಂಗ್, ಪ್ರೊ.ಎಸ್. ಸತೀಶ್ ಪ್ರೊ.ಎಸ್. ಚಂದ್ರ ನಾಯಕ್ ಸೇರಿದಂತೆ ಇತರರು ಭಾಗವಹಿಸಿದ್ದರು.
Key words: myosre university- Dr. C.N. Manjunath-oral health -body health.
ENGLISH SUMMARY..
Physical health will improve through a healthy mouth: Dr. C.N. Manjunath
Mysuru, September 21, 2022 (www.justkannada.in): “Parents should teach the children about personal hygiene, including proper method of washing hands and mouth. Our physical health will improve if maintain the health of our mouth properly,” observed Padmashree awardee, and Director of Jayadeva Institute of Cardiovascular Sciences and Research, Bengaluru, Dr. C.N. Manjunath
He participated in the 62nd Annual International Conference of the Association of Microbiologists of India, held at the Senate Bhavan, in Manasa Gangotri campus today. In his address, he said, “the secret of our health lies in the health of our mouth. Our body gets food through our mouth. Hence, we should be very careful about what we eat. Everyone should wash hands properly before eating, as many people wash hands nicely only after eating. But they forget to wash hands before having food,” he said.
“According to an internal survey in America, infant mortality ratio has increased as the hospital staff fail to maintain personal hygiene during deliveries. Hence, doctors and nurses should give more preference towards hygiene and cleanliness. More importantly everyone should improve immunity levels. Good sleep, moderate excercise, yoga, eating more vegetables, fruits and greens will improve our immunity levels. You can stay away from many diseases if you quit smoking and alcohol. If community is healthy, immunity will also be good,” he explained.
“There is a separate antibiotic policy in science. Azithromycin was misused during COVID time. That drug remains in the human bodies for a long time, even after COVID is cured. There might be 5% heart related problems among people who were infected by Corona virus and 2% of them might develop diabetes. This may lead to losing weight and allergies,” he opined.
“If our lifestyle is good, our physical health will also be good. We can stay away from several diseases by having good air and clean drinking water. Everyone should give priority to drink boiled water after becomes normal. Consume more vegetables and fruits, exercise moderately,” he advised
Padmashree award winner Ayyappan also spoke on the occasion. University of Mysore Vice-Chancellor Prof. G. Hemanth Kumar, former VC Prof. K.S. Rangappa, DRDO-DFRL Director Dr. Anil Datt Semwal, New Delhi Academy of Microbiological Sciences Chairman Prof. R.C. Kuhaad, IMA President Prof. Praveen Rishi, General Secretary Prof. Namitha Singh, Prof. S.Satish, Prof. N. Chandra Naik and others were present.
Keywords: University of Mysore/ International Conference/ Jayadeva Hospital, Bengaluru/ Dr. C.N. Manjunath