ಮೈಸೂರು,ಜನವರಿ,21,2025 (www.justkannada.in): ನಿವೇಶನ ಆಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒಳಗೊಂಡ ಸೈಟುಗಳನ್ನು ನೀಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಕೆ.ಬಿ.ಎಲ್ ಹೌಸ್ ಬಿಲ್ಡಿಂಗ್ ಕೋ- ಅಪರೇಟಿವ್ ಸೊಸೈಟಿಯಿಂದ ಷೇರು ಸಂಗ್ರಹಿಸುವ ಕಾರ್ಯ ಪ್ರಾರಂಭವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿ ಮಾಹಿತಿ ನೀಡಿರುವ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ನಿವೇಶನಾ ಆಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒಳಗೊಂಡ ಸೈಟುಗಳನ್ನ ನೀಡಬೇಕು ಎನ್ನುವ ಸದುದ್ದೇಶದಿಂದ ಕೆ.ಬಿ.ಎಲ್ ಹೌಸ್ ಬಿಲ್ಡಿಂಗ್ ಕೋ- ಅಪರೇಟಿವ್ ಸೊಸೈಟಿಯನ್ನು ಮೈಸೂರು ಕೇಂದ್ರವಾಗಿ ಇಟ್ಟುಕೊಂಡು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟಂತೆ ಸ್ಥಾಪಿಸಲಾಗಿದೆ. ಇದರ ಷೇರು ಸಂಗ್ರಹಿಸುವ ಕಾರ್ಯ ಪ್ರಾರಂಭವಾಗಿದ್ದು, ಫೆಬ್ರವರಿ 28ರಂದು ಕೊನೆಯ ದಿನವಾಗಿದೆ. ಎಲ್. ರವಿರವರು ಮುಖ್ಯ ಪ್ರವರ್ತಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೆ.ಬಿ.ಎಲ್ ಹೌಸ್ ಬಿಲ್ಡಿಂಗ್ ಕೋ- ಅಪರೇಟಿವ್ ಸೊಸೈಟಿ ಮುಖ್ಯ ಕೇಂದ್ರ ಕಛೇರಿ ಮೈಸೂರಿನ ಗೀತಾ ರಸ್ತೆಯಲ್ಲಿದೆ. ಕೆಬಿಎಲ್ ಸಿದ್ದಿ ವಿನಾಯಕ ದೇವಸ್ಥಾನ, KBL Silicon City ಇಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಷೇರು ಸಂಗ್ರಹಿಸಲು ಚಾಲನೆಯನ್ನು ನೀಡಲಾಯಿತು. ಇದರ ಷೇರು ಮೌಲ್ಯ 2500 ರೂಪಾಯಿ ಆಗಿದ್ದು, ನೀವು, ನಿಮ್ಮ ಸ್ನೇಹಿತರು, ಬಂಧುಗಳಿಗೂ ಈ ಷೇರುಗಳನ್ನು ತೆಗೆದು ಕೊಳ್ಳಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ. ಷೇರು ಖರೀದಿಸುವಾಗ ತಮ್ಮ Aadhar Xerox copy, PAN Card Xerox Copy and 2 PassPort Size Photos ಹಾಗೂ 2500 ರೂಪಾಯಿ ನಗದನ್ನೂ ನೀಡಬೇಕಾಗಿ ವಿನಂತಿಸಿ ಕೊಳ್ಳುತ್ತೇನೆ.
Application Form and Receipt ಗಾಗಿ ನಮ್ಮ ಸಂಸ್ಥೆಯ ಎಂ.ಎಸ್.ಉಮಶಂಕರ್ ಆರಾಧ್ಯ ರವರನ್ನು (ಮೊಬೈಲ್ ನಂಬರ್: 9343248739 ) ತಾವೂ ಸಂಪರ್ಕಿಸಬೇಕೆಂದು ಈಸಿ ನಿಂಗರಾಜ್ ಗೌಡ ತಿಳಿಸಿದ್ದಾರೆ.
Key words: mysore, KBL House Building Co-operative Society