ಮೈಸೂರು,ಜನವರಿ,21,2025 (www.justkannada.in): ಎಟಿಎಂಗೆ ಹಾಕಬೇಕಿದ್ದ ಹಣವನ್ನು ಕಳ್ಳತನ ಮಾಡಿ ಆ ಹಣದಿಂದ ಪ್ರೇಯಸಿಗೆ ಚಿನ್ನ ಖರೀದಿಸಿದ್ದ ಆರೋಪಿಯನ್ನು ಬಿಳಿಕೆರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ತುರುಗನೂರಿನ ಅಕ್ಷಯ್ ಬಂಧಿತ ಆರೋಪಿ. ಆಕ್ಷಯ್ ಎಟಿಎಂಗೆ ತುಂಬಬೇಕಿದ್ದ 5.80 ಲಕ್ಷ ರೂ. ಹಣವನ್ನ ಲಪಟಾಯಿಸಿದ್ದ. ತನ್ನ ಪ್ರೇಯಸಿಗೆ ಬಂಗಾರದ ಉಡುಗೊರೆ ನೀಡಲು ಎಟಿಎಂಗೆ ಹಣ ಹಾಕದೆ ಅದನ್ನು ಕದ್ದೊಯ್ದಿದ್ದ. ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಇದೀಗ ಎಣ್ಣೆ ಪಾರ್ಟಿ ವೇಳೆಯಲ್ಲೇ ಆರೋಪಿ ಅಕ್ಷಯ್ ಪೊಲೀಸರಿಗೆ ತಗಲಾಕೊಂಡಿದ್ದಾನೆ.
ಅಕ್ಷಯ್ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಬಂಧಿಸಲು ಬಂದ ಪೊಲೀಸರನ್ನ ಸ್ನೇಹಿತರ ಜೊತೆ ಸೇರಿ ತಳ್ಳಾಟ ನೂಕಾಡಿದ್ದಾನೆ. ಕುಡಿದ ಮತ್ತಿನಲ್ಲಿ ಆರೋಪಿ ಅಕ್ಷಯ್ ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ಕೊನೆಗೂ ಬಿಳಿಕೆರೆ ಠಾಣಾ ಪೊಲೀಸರು ಅಕ್ಷಯ್ ನನ್ನು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಮೈಸೂರಿನ ಟಿ.ಎಲ್.ಎಂಟರ್ ಪ್ರೈಸಸ್ ನಲ್ಲಿ ಅಕ್ಷಯ್ ಕೆಲಸಕ್ಕಿದ್ದನು. 16 ಎಟಿಎಂಗಳಿಗೆ ಹಣ ತುಂಬುವ ಕೆಲಸವನ್ನು ಕಂಪನಿಯು ಅಕ್ಷಯ್ ಗೆ ನೀಡಿತ್ತು. ಅಕ್ಷಯ್ ಕಂಪನಿಯ ಪರವಾಗಿ ಹಣ ಪಡೆದು ಗದ್ದಿಗೆಯ ಎಟಿಎಂಗೆ ಹಣ ತುಂಬುವಂತೆ ನಾಟಕವಾಡಿ 5.80 ಲಕ್ಷ ರೂ ತನ್ನ ಬ್ಯಾಗಿಗಿಳಿಸಿಕೊಂಡು ಎಸ್ಕೇಪ್ ಆಗಿದ್ದ. ಬಳಿಕ ತನ್ನ ಪ್ರೇಯಸಿ ತೇಜಸ್ವಿನಿಗೆ ಚಿನ್ನ ಕೊಡಿಸಿದ್ದ.
Key words: Accused, arrest, stole, money, ATM, mysore