ಮೈಸೂರಿನಲ್ಲಿ ಎರಡು ಕಡೆ ಐಟಿ ದಾಳಿ, ಪರಿಶೀಲನೆ

ಮೈಸೂರು,ಫೆಬ್ರವರಿ,5,2025 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಮಾರುತಿನಗರ ಹಾಗೂ ರಾಮಕೃಷ್ಣನಗರದಲ್ಲಿ ಉದ್ಯಮಿಗಳ ಮನೆ ಮೇಲೆ ದಾಳಿಯಾಗಿದೆ. ಮಾರುತಿನಗರದ ಕಾಂತರಾಜು ನಿವಾಸ, ರಾಮಕೃಷ್ಣನಗರದ ರಾಮಕೃಷ್ಣೆ ಗೌಡ ನಿವಾಸದ ಮೇಲೆ ಐಟಿ ದಾಳಿಯಾಗಿದೆ.

ರಾಮಕೃಷ್ಣೇಗೌಡ ಕಂಟ್ರಾಕ್ಟರ್ ಹಾಗು ಇಟ್ಟಿಗೆ ಫ್ಯಾಕ್ಟರಿ ಹೊಂದಿದ್ದರೇ ಕಾಂತರಾಜ್ ಸಿವಿಲ್ ಕಂಟ್ರಾಕ್ಟರ್ ಆಗಿದ್ದಾರೆ. ಐಟಿ ಅಧಿಕಾರಿಗಳು ಆದಾಯ ಮೂಲದ ದಾಖಲೆ ಕಲೆ ಹಾಕುತ್ತಿದ್ದಾರೆ. ಉದ್ಯಮಿಗಳು ಪ್ರಭಾವಿ ರಾಜಕಾರಣಿಗಳ ಆಪ್ತರಾಗಿದ್ದಾರೆ ಎನ್ನಲಾಗಿದೆ.

Key words: IT raids, inspections, Mysore