ಮೈಸೂರು,ಮಾ,16,2020(www.justkannada.in): ಕರೋನಾ ವೈರಸ್ ಭೀತಿಯಿಂದಾಗಿ ರಾಜ್ಯದಲ್ಲೆಡೆ ಒಂದು ವಾರಗಳ ಕಾಲ ಸಿನಿಮಾ ಥಿಯೇಟರ್, ಮಾಲ್ ಗಳು, ಶಾಲಾಕಾಲೇಜು, ಮದುವೆ ಸಭೆ ಸಮಾರಂಭಗಳನ್ನ ರಾಜ್ಯ ಸರ್ಕಾರ ಬಂದ್ ಮಾಡಿದೆ. ಆದರೆ ಮೈಸೂರಿನ ವಿಜಯನಗರದಲ್ಲಿರುವ ಆಧಾರ್ ಕೇಂದ್ರಕ್ಕೆ ಕರೋನಾ ಭೀತಿ ಇಲ್ವೆ ಎಂಬ ಪ್ರಶ್ನೆ ಮೂಡಿದೆ.
ಹೌದು, ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಮೈಸೂರಿನ ವಿಜಯನಗರದ ಆಧಾರ್ ಕೇಂದ್ರದ ಮುಂದೆ ಭಾರಿ ಜನರು ಸೇರುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಆಧಾರ್ ಕೇಂದ್ರಕ್ಕೆ ಸಾರ್ವಜನಿಕರು ಆಗಮಿಸುತ್ತಿದ್ದು, ದಿನನಿತ್ಯ 200ಕ್ಕೂ ಹೆಚ್ಚು ಮಂದಿ ಸೇರುತಿದ್ದಾರೆ.
ಈ ನಡುವೆ ಈಗಾಗಲೇ ಹೆಚ್ಚು ಜನ ಸೇರುವ ಎಲ್ಲಾ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದರೇ ಇಲ್ಲಿ ಆಧಾರ್ ಕೇಂದ್ರ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಆಧಾರ್ ಕೇಂದ್ರಕ್ಕೆ ಆಗಮಿಸುತ್ತಿರುವ ಜನರಿಗೆ ಅಲ್ಲಿನ ಸಿಬ್ಬಂದಿ ಹ್ಯಾಂಡ್ ಸ್ಯಾನಿಟೈಜರ್ ಸಿಂಪಡಿಸಿ ಒಳ ಬಿಡುತ್ತಿದ್ದಾರೆ. ಇನ್ನು ಕೆಲವೇ ಮಂದಿ ಮಾತ್ರ ಮಾಸ್ಕ್ ಧರಿಸಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಕರೋನಾ ಭೀತಿಯಿಂದಾಗಿ ಎಲ್ಲಡೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಾಗುತ್ತಿದೆ. ನೂರಾರು ಜನ ಸೇರುವ ಇಲ್ಲಿ ಕೇವಲ ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಮಾತ್ರ ಸಾಕೆ..? ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಳ್ಳಬಹುದಿತ್ತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
Key words: Mysore- Aadhaar Kendra-Corona virus- Anxiety-people