ಮೈಸೂರು ರಿಂಗ್ ರೋಡ್ ಅಪಘಾತ ಪ್ರಕರಣ: ಬೈಕ್ ಓಡಿಸುತ್ತಿದ್ದುದ್ದು ಯಾರು…?

ಮೈಸೂರು,ಮಾರ್ಚ್,26,2021(www.justkannada.in):  ಇತ್ತೀಚೆಗೆ ಮೈಸೂರು ರಿಂಗ್ ರೋಡ್ ಬಳಿ ಪೊಲೀಸರ ತಪಾಸಣೆ ವೇಳೆ ಬೈಕ್ ಅಪಘಾತ ಸಂಭವಿಸಿ ದೇವರಾಜ್ ಎಂಬುವವರು ಮೃತಪಟ್ಟಿದ್ದರು. ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೊಲೀಸರು ಬಿಡುಗಡೆ ಮಾಡಿದ್ದ ಗಾಯಾಳುವಿನ ವಿಡಿಯೋ ಹೇಳಿಕೆಗೂ  ಇದೀಗ ಮೃತ ದೇವರಾಜು ಅವರ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಾಗಿರುವ ಹೇಳಿಕೆಗೂ ಸಾಮ್ಯತೆ ಇಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.mysore- accidenrt-case-devaraju –wife- Complaint

ಹೌದು. ದಿನಾಂಕ 22 -3-2021 ರಂದು ಮೈಸೂರಿನ ರಿಂಗ್ ರಸ್ತೆಯಲ್ಲಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ದೇವರಾಜು ಮೃತಪಟ್ಟಿದ್ದರು. ಘಟನೆಯಲ್ಲಿ ದೇವರಾಜು ಅವರ ಸ್ನೇಹಿತ ಸುರೇಶ್ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.  ಅದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಗಾಯಾಳು ಸುರೇಶ್ ಅವರಿಂದ ಒಂದು ವಿಡಿಯೋ ಸಂದೇಶವನ್ನ ಬಿಡುಗಡೆ ಮಾಡಿದ್ದರು.

ಅದರಲ್ಲಿ ಪೊಲೀಸರದ್ದು ಏನು ತಪ್ಪಿಲ್ಲ. ದೇವರಾಜು ಅವರು ಬೈಕ್ ಓಡಿಸುತ್ತಿದ್ದರು. ನಾನು ಹಿಂಬದಿಯಲ್ಲಿ ಕುಳಿತಿದ್ದೆ. ಈ ವೇಳೆಯಲ್ಲಿ ರಿಂಗ್ ರಸ್ತೆ ಬಳಿ ತೆರಳುತ್ತಿದ್ದ ವೇಳೆ ಹಿಂದೆಯಿಂದ ಟ್ರಕ್ ಬಂದು ಗುದ್ದಿ ಈ ಘಟನೆ ಸಂಭವಿಸಿದೆ ಎಂದು ಸುರೇಶ್ ವಿಡಿಯೋ ಸಂದೇಶದಲ್ಲಿ ಹೇಳಿಕೆ ನೀಡಿದ್ದರು.mysore- accidenrt-case-devaraju –wife- Complaint

ಆದರೆ ಮೃತ ದೇವರಾಜ್ ಮಡದಿ  ಇದೀಗ ನೀಡಿರುವ ದೂರಿನ ಎಫ್ ಐಆರ್ ನಲ್ಲಿ ದೇವರಾಜ್ ಅವರು ಹಿಂಬದಿ ಕುಳಿತಿದ್ದರು. ಸುರೇಶ್ ಎಂಬುವವರು ಬೈಕ್ ಚಾಲನೆ ಮಾಡುತ್ತಿದ್ದರು ಎಂದು ಹೇಳಿಕೆ ದಾಖಲಾಗಿದೆ. ಹೀಗಾಗಿ ಈ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ENGLISH SUMMARY….

Mysuru ring road accident: Who was riding the bike?
Mysuru, Mar. 26, 2021 (www.justkannada.in): In an accident that took place in the Mysuru ring road a person named Devraj was killed while police were inspecting the vehicles. However, there is no similarity between the statement in the video released by the police concerning this accident and the statement given in the complaint registered by the wife of the deceased person, which has led to suspicion.
The bike rider Devraj fell from his bike in the Mysuru ring road on 22.03.2021 and died. One of his friends, pillion rider Suresh was injured and was admitted to the hospital. A few hours after the accident took place the police video recorded a statement from the injured person and released it.mysore- accidenrt-case-devaraju –wife- Complaint
In that video, the injured person had confessed that it was not a mistake by the police. Devraj was riding the bike and he was riding the pillion. When they were passing on the ring road a truck hit them, the statement read.
But in the complaint FIR, the deceased person Devraj’s wife has mentioned that Devraj was riding the pillion and Suresh was riding the bike. As there is a difference between both these statements it has led to suspicion.
Keywords: Mysuru ring road accident/ deceased Devraj/ pillion rider Suresh/ Mysuru City Police/ accident

Key words: mysore- accidenrt-case-devaraju –wife- Complaint