ಮೈಸೂರು,ಜೂನ್,6,2022(www.justkannada.in): ಮೈಸೂರಿನ ರೋಟರಿ MSECT, ACME ಸ್ಕೂಲ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಿವೇದಿತಾ ನಗರದ ರೋಟರಿ ಸುದರ್ಶಿನಿ ಬಿಲ್ಡಿಂಗ್ ನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಜಾಗೃತಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಮಾತನಾಡಿದ ರೋಟರಿ ಎಂಎಸ್ ಇಸಿಟಿ ಅಧ್ಯಕ್ಷ ಡಾ.ಶರತ್ ಕುಮಾರ್, ಕ್ಷೀಣಿಸುತ್ತಿರುವ ಪರಿಸರಕ್ಕೆ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ವಿವರಿಸಿದರು. ನಮ್ಮ ಮಣ್ಣನ್ನು ಉಳಿಸಲು ಕೆಲವು ತಕ್ಷಣದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಚಕ್ರಪಾಣಿ ಮತ್ತು ತಂಡದಿಂದ ಸ್ಫೂರ್ತಿದಾಯಕ ನಾಟಕವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಶಾಲಾ ಆವರಣದಿಂದ ಸಮೀಪದ ಪ್ರದೇಶಗಳಿಗೆ ಘೋಷಣಾ ಫಲಕಗಳು ಮತ್ತು ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದರು. ಮಣ್ಣಿನ ಸವಕಳಿಯಿಂದ ದಿನದಿಂದ ದಿನಕ್ಕೆ ನಶಿಸುತ್ತಿರುವ ನಮ್ಮ ‘ಒಂದೇ ಭೂಮಿ’ ಮತ್ತು ಅದರ ಮಣ್ಣನ್ನು ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ರೋಟರಿ MSECT ಅಧ್ಯಕ್ಷ, Rtn ರಮೇಶ್ ರಾವ್, ಮಾಜಿ ಅಧ್ಯಕ್ಷ Rtn. ಜ್ಞಾನ ಶಂಕರ್, ಶಾಲಾ ಕಾರ್ಯದರ್ಶಿ ಅರುಣ್ ಸಿಂಗ್, ಪ್ರಾಂಶುಪಾಲೆ ಸುಭಾಷಿಣಿ ಆರ್ ಉಪಸ್ಥಿತರಿದ್ದರು.
Key words: mysore-ACME School – World Environment Day- awareness