ಮೈಸೂರು,ಜೂ,26,2019(www.justkannada.in): ಶಾಲಾ ಮಕ್ಕಳ ಸುರಕ್ಷತೆಗೆ ಎಚ್ಚೆತ್ತ ಆರ್ ಟಿಓ ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶ ಪಾಲಿಸದ ಆಟೋ ಮತ್ತು ವ್ಯಾನ್ ಗಳ ಚಾಲಕರಿಗೆ ದಂಡವಿಧಿಸುತ್ತಿದ್ದು ಈ ಹಿನ್ನೆಲೆ ಇಂದು ಚಾಲಕರು ಸಭೆ ನಡೆಸಿ ಪೊಲೀಸ್ ಕಮಿಷನರ್ ಬಳಿ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ.
ಸುಪ್ರಿಂ ಕೋರ್ಟ್ ಆದೇಶ ಪಾಲಿಸುವಂತೆ ಚಾಲಕರಿಗೆ ಆರ್ ಟಿಓ ಅಧಿಕರಿಗಳು ತಾಕೀತು ಮಾಡಿದ್ದು, ಪ್ರತಿ ದಿನ ಮಕ್ಕಳನ್ನ ಶಾಲೆಗೆ ಕರೆದೊಯ್ಯುವ ಆಟೋ ಹಾಗೂ ವ್ಯಾನ್ ಚಾಲಕರ ದಾಖಲಾತಿಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಮೀರಿದ ಆಟೋ ವ್ಯಾನ್ ಚಾಲಕರಿಗೆ ಆರ್ ಟಿ ಓ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.
ಈ ಮೂಲಕ ಆರ್ ಟಿ ಓ ಅಧಿಕಾರಿಗಳ ಕ್ರಮದಿಂದ ಕಂಗಾಲಾದ ಆಟೋ ಮತ್ತು ವ್ಯಾನ್ ಚಾಲಕರು ಇಂದು ಒಂದು ದಿನದ ಚಾಲನೆ ನಿಲ್ಲಿಸಿ ತಮ್ಮ ಬೇಡಿಕೆ ಹಾಗೂ ಕಷ್ಟವನ್ನ ಕಮೀಷನರ್ ಗೆ ತಿಳಿಸಲು ಮುಂದಾದರು. ಈ ಸಂಬಂಧ ಡಿಸಿ ಆಫೀಸ್ ಎದುರಿನ ಓವಲ್ ಮೈದಾನದಲ್ಲಿ ಚಾಲಕರು ಸಭೆ ನಡೆಸಿ ಚರ್ಚಿಸಿದ್ದಾರೆ.
ಕಮಿಷನರ್ ಕರೆದಿರುವ ಸಭೆಗೂ ಮುನ್ನ ಆಟೋ ಹಾಗೂ ವ್ಯಾನ್ ಚಾಲಕರು ಸಭೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಿ ನಾರಾಯಣ್ , ಸುಪ್ರೀಂ ಕೋರ್ಟ್ ಆದೇಶದಂತೆ ಆಟೋದಲ್ಲಿ 6 ಮಕ್ಕಳ ವ್ಯಾನ್ ನಲ್ಲಿ 8 ಮಕ್ಕಳು ಮಾತ್ರ ಇರಬೇಕು. ನಾವು ಸುಪ್ರೀಂ ಕೋರ್ಟ್ ಆದೇಶ ಪಾಲಿಸಿದರೆ ಜೀವನ ನಡೆಸಲು ಆಗಲ್ಲ. ನಮಗೆ ಆಟೋಗೆ 8 ಮಕ್ಕಳು ವ್ಯಾನ್ ಗೆ 10 ಮಕ್ಕಳನ್ನ ನೀಡುವಂತೆ ಕಮಿಷನರ್ ರವರನ್ನ ಕೇಳುತ್ತೇವೆ. ಸುಪ್ರೀಂ ಕೋರ್ಟ್ ಗೆ ನಮ್ಮ ಮನವಿಯನ್ನ ಸಲ್ಲಿಸುವಂತೆ ಅವರಿಗೆ ತಿಳಿಸುತ್ತೇವೆ ಎಂದು ಹೇಳಿದರು.
Key words: mysore-Action – -RTO officers – Meeting -auto – driver- Commissioner