ಮೈಸೂರು,ಫೆ,13,2020(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಶ್ರವಣಶಕ್ತಿ ದಿನ’ದ ಅಂಗವಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಗರ್ಭಿಣಿಯರಿಗಾಗಿ’ ಶ್ರವಣಶಕ್ತಿಯ ರಕ್ಷಣೆ ಕುರಿತು ತಿಳುವಳಿಕೆ ಕಾರ್ಯಕ್ರಮ’ವನ್ನು ಆಯೋಜಿಸಿದೆ.
ಇದೇ ಫೆಬ್ರವರಿ16ರ ಬೆಳಿಗ್ಗೆ 10:30ರಿಂದ 12.00ರವರೆಗೆ ‘ಶಿಶುಗಳಲ್ಲಿ ಕಿವಿ ಮತ್ತು ಶ್ರವಣಶಕ್ತಿಯ ಸಹಜ ಬೆಳವಣಿಗೆ’ಕುರಿತು ಸಲಹೆ ನೀಡುವ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ. ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಗರ್ಭಿಣಿಯರಿಗಾಗಿ’ ತಿಳುವಳಿಕೆ ಕಾರ್ಯಕ್ರಮ’ವನ್ನು ಆಯೋಜಿಸಿದೆ.
ನೋಂದಣಿಗಾಗಿ’ ಸಂವಹನ ನ್ಯೂನತೆ ತಡೆಗಟ್ಟುವಿಕೆ ವಿಭಾಗದ ಶ್ರೀ.ಉಲ್ಲಾಸ್ ಎನ್. ಭಾರ್ಗವ್(+918050951586)/ ಶ್ರೀ ಹರೀಶ್ ಕುಮಾರ್(+919738421106) ಅವರನ್ನು ಸಂಪರ್ಕಿಸಬಹುದು. ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಪ್ರಮುಖ ಸಂಸ್ಥೆಯಾಗಿದೆ. ಇದು ದೇಶದ ನಾಗರೀಕರಲ್ಲಿ ಶ್ರವಣಶಕ್ತಿಯನಷ್ಟವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಅವಿರತವಾಗಿ ಶ್ರಮಿಸುತ್ತಿದೆ.
Key words: mysore- AIISH-Audiovisual Day- Program – Influence – Ears and Hearing – Infants’.